×
Ad

ಎಲ್ಲ ಅನುಭವಿಸಿದ ಬಳಿಕ ಪಕ್ಷ ಕೊಳೆತು ಹೋಯಿತಾ?

Update: 2017-03-09 17:57 IST

ಮಂಗಳೂರು, ಮಾ.9: ಪಕ್ಷದ ಎಲ್ಲ ಅಧಿಕಾರಗಳನ್ನು ಅನುಭವಿಸಿದ ಬಳಿಕ ಈಗ ಹೊಸ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ವಿಪರ್ಯಾಸ. ಸಿದ್ಧಾಂತವನ್ನು ಮರೆತು ಪಕ್ಷ ತೊರೆಯುವುದಾದರೆ ಎಲ್ಲ ಅನುಭವಿಸಿದ ಪಕ್ಷ ಈಗ ಕೊಳೆತು ಹೋಯಿತು ಅಂತ ಅರ್ಥನಾ? ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು.

ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕುಮಾರ್ ಬಂಗಾರಪ್ಪಪಕ್ಷ ತೊರೆದ್ದರಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗುವುದಿಲ್ಲ. ಪಕ್ಷದಲ್ಲಿ ಅನೇಕ ನಾಯಕರು ಇದ್ದಾರೆ. ಪಕ್ಷ ಸಿದ್ಧಾಂತದ ಆಧಾರದಲ್ಲಿ ರಾಜಕಾರಣ ಮಾಡಬೇಕು. ರಾಜಕಾರಣ ಅಂತ ಹೇಳಿಕೊಂಡು ಸಂತೆ ವ್ಯಾಪಾರ ಮಾಡಲಿಕ್ಕೆ ಆಗಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣರು ಪಕ್ಷ ತೊರೆಯುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕಾಗೋಡು, ಕುಮಾರ್ ಬಂಗಾರಪ್ಪ ತಮ್ಮನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಬಂಗಾರಪ್ಪರೇ ಹೇಳಿದ್ದರು. ಹೀಗಿರುವಾಗ ನಾನು ಕುಮಾರ್ ಬಂಗಾರಪ್ಪ ಬಗ್ಗೆ ಏನು ಹೇಳು ಹೇಳಲಿ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News