×
Ad

ಅವಧಿ ಮೀರಿದ ಮಾತ್ರೆ ಮಾರಾಟ: ಮೆಡಿಕಲ್ ಸ್ಟೋರ್ ಮಾಲಕರಿಗೆ ದಂಡ

Update: 2017-03-09 20:04 IST

ಮಂಡ್ಯ, ಮಾ.9: ಅವಧಿ ಮುಗಿದ ಮಾತ್ರೆ ಮಾರಾಟ ಮಾಡಿದ ನಗರದ ಮೆಡಿಕಲ್ ಸ್ಟೋರ್‌ವೊಂದರ ಮಾಲಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ 15 ಸಾವಿರ ರೂ. ದಂಡ ವಿಧಿಸಿದೆ.

ಇಲ್ಲಿನ ಅಶೋಕನಗರದ ಸೋಮವರದ ಎಂಬುವರ ಪತ್ನಿ ವಿಶಾಲಾಕ್ಷಿ ಎಂಬುವರು ದೂರು ನೀಡಿದ್ದು, ಸಂಜೀವಿನಿ ಮೆಡಿಕಲ್ ಸ್ಟೋರ್ ಮಾಲಕರಿಗೆ ದಂಡ ವಿಧಿಸಿ ತೀರ್ಪು ನೀಡಲಾಗಿದೆ.

 ಅಲೆವೋ 500 ಎಂಜಿಯ ಐದು ಮಾತ್ರೆಗಳನ್ನು 134 ರೂ. ನೀಡಿ ಸಂಜೀವ್ನಿ ಮೆಡಿಕಲ್ ಸ್ಟೋರ್‌ನಿಂದ ಖರೀದಿಸಿದ್ದು, ಮಾತ್ರೆಗಳ ಅವಧಿ ಮುಗಿದಿರುವ ಬಗ್ಗೆ ಮಾಹಿತಿ ನೀಡಿ ಪರಿಹಾರಕ್ಕೆ ವಿಶಾಲಾಕ್ಷಿ ಅವರು ವೇದಿಕೆಗೆ ದೂರು ನೀಡಿದ್ದರು.

ವಾದ ವಿವಾದ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯ ಅಧ್ಯಕ್ಷ ಟಿ.ಶ್ರೀಕಂಠ, ಸದಸ್ಯೆ ಎಂ.ಕೆ.ಲತಾ ಅವರು, ಸಂಜೀವ್ನಿ ಮೆಡಿಕಲ್ ಸ್ಟೋರ್ ಮಾಲಕರು, ಪಿರ್ಯಾದುದಾರರಾದ ವಿಶಾಲಾಕ್ಷಿ ಅವರಿಗೆ 10 ಸಾವಿರ ರೂ. ಪರಿಹಾರ, 5 ಸಾವಿರ ರೂ. ಪ್ರಕರಣದ ಖರ್ಚು ಹಾಗೂ ಮಾತ್ರೆಗಳ ಮೊತ್ತ 134 ರೂ.ಗಳನ್ನು ನೀಡಬೇಕು ಎಂದು ಆದೇಶ ಮಾಡಿದ್ದಾರೆ.

ಪಿರ್ಯಾದುದಾರರ ಪರವಾಗಿ ವಕೀಲ ಆರ್.ಜಗನ್ನಾಥ್ ವೇದಿಕೆಯಲ್ಲಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News