×
Ad

ಆನೇಕಲ್: ಹುಲ್ಲಿನ ಬಣವೆಗೆ ಬೆಂಕಿ

Update: 2017-03-10 19:51 IST

ಆನೇಕಲ್, ಮಾ.10: ಆನೇಕಲ್ ಬಳಿಯ ಸಿಂಗಸಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ಒಣ ಹುಲ್ಲಿನ ಬಣವೆಗೆ ಬೆಂಕಿ ತಗಲಿದೆ.

ಮುನಿರಾಜು ಎಂಬುವವರಿಗೆ ಸೇರಿದ ಹುಲ್ಲಿನ ಸಂಗ್ರಹವಾಗಿದ್ದು, 20 ದಿನಗಳಿಂದ ಮೇವು ಸಂಗ್ರಹಣೆ ಮಾಡಿದ್ದರು.

ಸುಮಾರು 30 ಸಾವಿರ ರೂ ನೀಡಿ ಕೊಂಡಿದ್ದ ರಾಗಿ- ಬತ್ತದ ಒಣ ಹುಲ್ಲಿನ ಬಣವೆ ಅದಾಗಿದ್ದು, ಸ್ಥಳಕ್ಕೆ ಆನೇಕಲ್ ಅಗ್ನಿಶಾಮಕ ದಳ ಮತ್ತು ಪೊಲೀಸರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಹುಲ್ಲಿನ ಬಣವೆಗೆ ಹತ್ತಿಕೊಂಡಿದ್ದ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News