ಔತಣಕೂಟ ಮುಗಿಸಿಕೊಂಡು ತೆರಳುತಿದ್ದ ಓರ್ವ ವ್ಯಕ್ತಿ ಮಸಣಕ್ಕೆ; ಮೂವರು ಆಸ್ಪತ್ರೆಗೆ
Update: 2017-03-10 20:57 IST
ಮಂಡ್ಯ, ಮಾ.10: ಮುಂದಿನ ಟೈರ್ ಪಂಕ್ಚರ್ ಆದ ಕಾರಣದಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಿಳಿದೇಗಲು ಗ್ರಾಮದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಬಸರಾಳು ಹೋಬಳಿಯ ಚಂದಗಾಲು ಗ್ರಾಮದ ನಾಗರಾಜು ಅವರ ಪುತ್ರ ಗುರು (40) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ಹರೀಶ್, ಮಂಜುನಾಥ್ ಹಾಗೂ ಚೇತನ್ ಗಾಯಗೊಂಡಿದ್ದಾರೆ.
ಮದ್ದನಹಟ್ಟಿ ದೇವಾಸ್ಥಾನದ ಬಳಿ ಆಯೋಜಿಸಿದ್ದ ಔತಣಕೂಟ ಮುಗಿಸಿಕೊಂಡು ಮಂಡ್ಯಕ್ಕೆ ಆಗಮಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು, ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.