×
Ad

ಕರಿಮನೆ-ಕಲ್ಗೋಡು ಮೀಸಲು ಅರಣ್ಯ ಬೆಂಕಿಗೆ ಆಹುತಿ

Update: 2017-03-11 22:34 IST

ಚಿಕ್ಕಮಗಳೂರು, ಮಾ.11: ಕೊಪ್ಪ ವಿಭಾಗದ ಕಳಸ ವಲಯದ ಕರಿಮನೆ-ಕಲ್ಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬಿದ್ದ ಕಾಡ್ಗಿಚ್ಚು ಎರಡನೇ ದಿನವಾದ ಶನಿವಾರ ಕೂಡಾ ಕಾಡನ್ನು ಆಹುತಿ ಪಡೆಯುತ್ತಿದ್ದು, ನೂರಾರು ಎಕರೆ ಅರಣ್ಯ ಭೂಮಿ ಸುಟ್ಟು ಕರಕಲಾಗುತ್ತಿದೆ.


ಕಳಸ ಭಾಗದ ದಟ್ಟ ಅರಣ್ಯದಲ್ಲ್ಲಿ ಕಂಡು ಬಂದಿರುವ ಬೆಂಕಿ ಕೆಲವೇ ತಾಸಿನಲ್ಲಿ ಇಡೀ ಕಾಡನ್ನು ಆವರಿಸಿಕೊಂಡಿದೆ. ಕಡಿದಾದ ಕಾಡು ಪ್ರದೇಶ ಇದಾಗಿದ್ದು, ಕಳಸ ಪಟ್ಟಣದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ.

ಅರಣ್ಯದೊಳಗೆ ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದರೂ ಕೇವಲ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ.

ಅರಣ್ಯ ಸಿಬ್ಬಂದಿಗಳಿಗೆ ಸ್ಥಳೀಯರು ಕೈ ಜೋಡಿಸಿದ್ದಾರೆ. ಸಿಬ್ಬಂದಿಗೆ ಬೆಂಕಿ ನಂದಿಸುವ ಸಾಧನವಾಗಲಿ, ಜೀವ ರಕ್ಷಕ ಕವಚಗ ಳಾಗಲಿ ಲಭ್ಯವಿರದೆ ಪರದಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News