×
Ad

​ಅಪರಾಧಿಗಳನ್ನು ಮಟ್ಟ ಹಾಕುವುದೇ ಪೊಲೀಸರ ಗುರಿಯಾಗಲಿ: ಐಜಿಪಿ ಹರಿಶೇಖರನ್

Update: 2017-03-11 22:37 IST

ಭಟ್ಕಳ, ಮಾ.11: ಸಮಾಜದಲ್ಲಿ ಅಶಾಂತಿಯನ್ನು ಹರಡುವ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡುವುದರ ಮೂಲಕ ಪೊಲೀಸರು ಶಿಸ್ತಿನ ಸಿಪಾಯಿ ಎನ್ನುವುದನ್ನು ತೋರಿಸಿಕೊಡಬೇಕೆಂದು ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್ ಹೇಳಿದರು. ಅವರು ಶನಿವಾರ ಸಂಜೆ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ಪರೇಡ್ ಗೌರವ ಸಮಾರ್ಪಣಾ ಸಮಾರಂಭದಲ್ಲಿ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದರು.


ಎಲ್ಲ ಧರ್ಮಗಳಲ್ಲಿ ಸಮಾಜಘಾತುಕ ಶಕ್ತಿಗಳಿದು,್ದ ಅವರು ಸಮಾಜವನ್ನು ಅಶಾಂತಿಯ ತಾಣವನ್ನು ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಮೇಲೆ ಪೊಲೀಸರು ಹದ್ದಿನ ನಿಗಾ ಇಡುವುದರ ಮೂಲಕ ಪೊಲೀಸ್ ಪವರ್ ತೋರಿಸಬೇಕು.
ಅಪರಾಧಿಗಳಲ್ಲಿ ಭಯವನ್ನುಂಟು ಮಾಡುವುದರ ಮೂಲಕ ಅವರಲ್ಲಿನ ಅಪರಾಧವನ್ನು ನಾಶಪಡಿಸಬೇಕು, ಈಗಾಗಲೇ ಅಪರಾಧಿಗಳ ಕುರಿತಂತೆ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಹಲವು ಮಹತ್ತರ ಕಾರ್ಯವನ್ನು ಮಾಡಬೇಕಾಗಿದೆ ಎಂದ ಅವರು, ಆತ್ಮ ವಿಶ್ವಾಸ ಹಾಗೂ ಆತ್ಮ ಧೈರ್ಯಗಳು ಪೊಲೀಸರ ಎರಡು ಕಣ್ಣುಗಳಿದ್ದ ಹಾಗೆ ಯಾರೂ ಕೂಡ ತಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ಒದಗುವಂತಹ ಕೆಲಸ ಮಾಡಕೂಡದು, ಶಿಸ್ತನ್ನು ಕಾಪಾಡಿಕೊಂಡು ಹೋಗುವುದರ ಮೂಲಕ ತಮ್ಮಲ್ಲಿ ಧೈರ್ಯವನ್ನು ತಂದುಕೊಳ್ಳಬೇಕು ಎಂದು ಕರೆ ನೀಡಿದರು.

ನಮ್ಮ ವೈಯಕ್ತಿಕ ತೊಂದರೆ, ಸಮಸ್ಯೆಗಳನ್ನು ಬದಿಗೊತ್ತಿ ಭಟ್ಕಳ ಉಪವಿಭಾಗದಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರಬೇಕು, ಅಪರಾಧವನ್ನು ತಡೆಯುವುದು ಮತ್ತು ಅದನ್ನು ಪತ್ತೆ ಹಚ್ಚುವುದು ನಮ್ಮ ಹೊಣೆಗಾರಿಕೆಯಾಗಿದೆ.

ಯಾವುದೇ ಧರ್ಮ, ಜಾತಿ, ಮತ, ಭಾಷೆಯ ವ್ಯಕ್ತಿಯಾಗಿರಲಿ ವಿನಯ ಪ್ರದರ್ಶಿಸಿದರೆ ಖಂಡಿತ ಸಹಾಯ ಮಾಡಿ, ದರ್ಪ ತೋರಿದರೆ ಅವರಿಗೆ ಪೊಲೀಸರ ಪವರ್ ಏನು ಎಂಬುದನ್ನು ತೋರಿಸಿ ಎಂದರು. ಮುಂದಿನ ದಿನಗಳಲ್ಲಿ ಭಟ್ಕಳದಲ್ಲಿ ಎಲ್ಲ ಧರ್ಮ, ಜಾತಿಯ ಜನರನ್ನು ಸೇರಿಸುವುದರ ಮೂಲಕ ಜನಸಂಪರ್ಕ ಸಭೆೆಯನ್ನು ಹಮ್ಮಿಕೊಳ್ಳುವ ಯೋಜನೆಯಿದೆ.

ಪೊಲೀಸರು ಕಾನೂನಿನಡಿ ಕೆಲಸ ಮಾಡುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿಸಬೇಕು ಎಂದರು. ಈ ಸಂದಭರ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ವಿನಾಯಕ ಪಾಟೀಲ್, ಅಡಿಶನಲ್ ಎಸ್ಪಿ ಇದೇವರಾಜ್, ಸಿಪಿಐ ಸುರೇಶ್ ನಾಯಕ, ಡಿವೈಎಸ್ಪಿ ಶಿವಪ್ರಕಾಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News