ಅಕ್ರಮ ಮದ್ಯ ಸಾಗಣೆ: ವಶ
Update: 2017-03-11 22:38 IST
ಹೊನ್ನಾವರ, ಮಾ11: ತಾಲೂಕಿನ ಕರ್ಕಿ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ಹುಂಡೈ ಅಸೆಂಟ್ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 88 ಸಾವಿರ ರೂ. ವೌಲ್ಯದ ಗೋವಾ ಮದ್ಯವನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಹೋಗುತ್ತಿದ್ದ ವೇಳೆ ಮಾಹಿತಿ ಮೇರೆಗೆ ಹೊನ್ನಾವರ ಪಿಎಸ್ಸೈ ಆನಂಡಮೂರ್ತಿ ನೇತೃತ್ವದ ತಂಡ ಕರ್ಕಿ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾರು ಚಾಲಕ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ತನಿಖೆ ಮುಂದುವರಿದಿದೆ.