×
Ad

ಲಲಿತಾ ಭಟ್‌ಗೆ ‘ಶಿಕ್ಷಣ ಸೇವಾರತ್ನ’ ಪ್ರಶಸ್ತಿ

Update: 2017-03-11 22:40 IST

ಹೊನ್ನಾವರ, ಮಾ.11: ತಾಲೂಕಿನ ಮಾವಿನಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಲಲಿತಾ ಟಿ.ಭಟ್ ಅವರಿಗೆ ರಾಜ್ಯದ ಉತ್ತಮ ಶಿಕ್ಷಕರಿಗೆ ನೀಡುವ ‘ಶಿಕ್ಷಣ ಸೇವಾರತ್ನ’ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶಿಕ್ಷಣ ಜ್ಞಾನ ಪತ್ರಿಕೆ ಹಾಗೂ ರೋಟರಿ ಕ್ಲಬ್ ಕೋಲಾರ ಜಂಟಿಯಾಗಿ ಇತ್ತೀಚೆಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಿವೆ. ಮೂಲತಃ ಹೊನ್ನಾವರ ತಾಲೂಕಿನ ಕರ್ಕಿಯವರಾದ ಲಲಿತಾ ಭಟ್ಟ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಅನುಪಮ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News