ಪೆರೋಲ್ ನಲ್ಲಿ ವಾಪಸಾದ ಅಪರಾಧಿ ಮಗನೊಂದಿಗೆ ನೇಣಿಗೆ ಶರಣು
Update: 2017-03-12 13:34 IST
ನೆಲಮಂಗಲ, ಮಾ.12: ಜೈಲ್ ನಿಂದ ಪೆರೋಲ್ ಮೂಲಕ ಹೊರಬಂದಿದ್ದ ಕೊಲೆ ಪ್ರಕರಣದ ಅಪರಾಧಿಯೊಬ್ಬರು ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶೆಟ್ಟಿಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ.
ಶ್ರೀಧರ ಕುಮಾರ್ (49) ಮತ್ತು ಶ್ರೀವಿಷ್ಣು(13) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತನ್ನ ಸ್ವಂತ ಅಕ್ಕನ ಗಂಡನನ್ನು ಕೊಲೆಗೈದ ಪ್ರಕರಣದಲ್ಲಿ ಶ್ರೀಧರ ಕುಮಾರ್ ಹದಿನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದನು. ಎಂಟು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಪೆರೋಲ್ ಮೇಲೆ ಮೂರು ದಿನಗಳ ಹಿಂದೆ ಜೈಲ್ ನಿಂದ ಹೊರಬಂದಿದ್ದರು.
ಶ್ರೀಧರ ಕುಮಾರ್ ಪತ್ನಿಯ ತವರು ಮನೆಯಲ್ಲಿ ನಿನ್ನೆ ರಾತ್ರಿ ಊಟ ಮುಗಿಸಿ ಮನೆಗೆ ವಾಪಸಾಗಿದ್ದರು. ಮಗನೊಂದಿಗೆ ನೇಣಿಗೆ ಶರಣಾಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.