ಪ್ರತ್ಯೇಕ ಘಟನೆ: ಮೂವರು ನಾಪತ್ತೆ
ಶಿವಮೊಗ್ಗ, ಮಾ.12: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಕಣ್ಮರೆಯಾದ ಘಟನೆ ವರದಿಯಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗುರುಪುರ ವಾಸಿ ರಂಗನಾಥ್ ಎಂಬ 27 ವರ್ಷದ ವ್ಯಕ್ತಿ ಮಾ.8 ರಂದು ಶಿವಮೊಗ್ಗದ ಗುರುಪುರ ಮನೆಯಿಂದ ಕೆಲಸಕ್ಕೆಂದು ಹೋದವರು ಇದುವರೆಗೂ ಮನೆಗೆ ವಾಪಾಸಾಗಿರುವುದಿಲ್ಲ. ಇವರು 5.8 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಕನ್ನಡ ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ತುಂಬ ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಯಲವಟ್ಟಿಯಿಂದ ಭೂಮಿಕಾ ಎಂಬ 21 ವರ್ಷದ ಯುವತಿ ಸಹ್ಯಾದ್ರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ಮಾ.4 ರಂದು ಕಾಲೇಜ್‌ಗೆಂದು ಹೋದವರು ಮನೆಗೆ ವಾಪಸಾಗಿಲ್ಲ ಎನ್ನಲಾಗಿದೆ.
ಈ ಯುವತಿಯ ಚಹರೆ ಸಾಮಾನ್ಯ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಬಿಳಿ ಮೈಬಣ್ಣ, ಕಪ್ಪು ಕೂದಲು, ಕನ್ನಡ ಭಾಷೆ ಮಾತನಾಡುತ್ತಾರೆ. ಹಸಿರು ಬಣ್ಣದ ಚೂಡಿದಾರ್, ಮೆರೂನ್ ಕಲರ್ ಪ್ಯಾಂಟ್ ಹಾಗೂ ವೇಲ್ ಧರಿಸಿರುತ್ತಾರೆ. ಇವರುಗಳ ಬಗ್ಗೆ ಸುಳಿವು ದೊರತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಶಿವಮೊಗ್ಗ ,ದೂ.ಸಂ.08182-261413 ಅಥವಾ ಪೊಲೀಸ್ ಸಬ್‌ಇನ್‌ಸ್ಪೆೆಕ್ಟರ್, ಜಯನಗರ ಪೊಲೀಸ್ ಠಾಣೆ, ದೂ.ಸಂ. 08182- 261418,261400ಗೆ ಮಾಹಿತಿಯನ್ನು ನೀಡಬೇಕೆಂದು ಪೊಲೀಸ್ ಪ್ರಕಟನೆ ತಿಳಿಸಿದೆ
ಮಹಿಳೆ ನಾಪತ್ತೆ : ಭದ್ರಾವತಿ ತಾಲೂಕು ಟಿ.ಕೆ.ರಸ್ತೆ, ಯಕೇನ್ಷಾ ಕಾಲನಿಯ ವಾಸಿ ಏಜಾಝ್ ಅಹ್ಮದ್ ಎಂಬವರ ಪತ್ನಿ ಜಮೀಲಾ ಬಾನು ಎಂಬ 42 ವರ್ಷದ ಮಹಿಳೆ ಫೆಬ್ರವರಿ 24 ರಂದು ಶಿವಮೊಗ್ಗ ಜೈಲ್‌ನಲ್ಲಿದ್ದ ಮಗನಿಗೆ ಊಟ ಕೊಡಲು ಹೋದವರು ಇದುವರೆಗೂ ಮನೆಗೆ ವಾಪಸಾಗಿಲ್ಲ ಎಂದು ತಿಳಿದು ಬಂದಿದೆ.
ಈ ಮಹಿಳೆಯ ಚಹರೆ 5.0 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಕಪ್ಪು ಕೂದಲು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ಕಪ್ಪು ಬುರ್ಖಾ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ದೊರತಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಶಿವಮೊಗ್ಗ ದೂ.ಸಂ.08182-261413 ಅಥವಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್, ಜಯನಗರ ಪೊಲೀಸ್ ಠಾಣೆ, ದೂ.ಸಂ. 08182-261416,261400ಗೆ ಮಾಹಿತಿಯನ್ನು ನೀಡಬೇಕೆಂದು ಪೊಲೀಸ್ ಪ್ರಕಟನೆ ತಿಳಿಸಿದೆ.