ಗದಗ: ವಾಟ್ಸ್‌ಆ್ಯಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ ನಾಲ್ವರನ್ನು ಅರೆಬೆತ್ತಲೆಗೊಳಿಸಿ ಥಳಿತ
Update: 2017-03-13 18:39 IST
ಗದಗ, ಮಾ.೧೩: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ವಾಟ್ಸ್‌ಆ್ಯಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ನಾಲ್ವರು ಯುವಕರನ್ನು ಸಾರ್ವಜನಿಕವಾಗಿ ಅರೆಬೆತ್ತಲುಗೊಳಿಸಿ ಥಳಿಸಲಾದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ತೀವ್ರವಾಗಿ ಗಾಯಗೊಂಡ ಖಾಜೇ ಸಾಬ್ ಮಲಸಮುದ್ರ, ಮಲ್ಲಿಕ್‌ಜಾನ್ ನಾಲಬಂದ, ಗೌಸ್‌ಸಾಬ ರಾಹುತ್, ಮುಹಮ್ಮದ್ ಜಕರಿಯ ಅವರನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಧಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಬಸವರಾಜ ಗಡೇಕಾರ, ಧವನಪ್ಪ ಸಂಬಳ, ಸಂದೀಪ ಸುಬೇದಾರ ಎಂಬವರನ್ನು ಬಂಧಿಸಲಾಗಿದೆ.