ಅಕ್ರಮ ಮರಳು ಸಾಗಿಸುತ್ತಿದ್ದ ಪಿಕ್ಆಪ್ ವಾಹನ ಸೇರಿದಂತೆ ನಾಲ್ವರ ಬಂಧನ
Update: 2017-03-13 20:23 IST
ಸುಂಟಿಕೊಪ್ಪ, ಮಾ.13: ಅಕ್ರಮ ಮರಳು ಸಾಗಿಸುತ್ತಿದ್ದ ಪಿಕ್ ಆಪ್ ವಾಹನ ಸೇರಿದಂತೆ ನಾಲ್ವರು ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಸಮೀಪದ ಮಾದಾಪುರದ ಹಟ್ಟಿಹೊಳೆಯಿಂದ ಹೊಸತೋಟದತ್ತ ಅಕ್ರಮ ಮರಳನ್ನು ಸಾಗಿಸುತ್ತಿರುವ ಮಾಹಿತಿಯನ್ನು ಪಡೆದುಕೊಂಡ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಪಿಕ್ ಆಪ್ ವಾಹನ ಸೇರಿದಂತೆ ಅದರಲ್ಲಿದ್ದ ರಮಾನಂದ, ಸುರೇಶ್, ಉಣ್ಣಿಕೃಷ್ಣ, ಸುದೀನ ಎಂಬವವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.