×
Ad

​ಬಾಲಕಿಯ ಅತ್ಯಾಚಾರ

Update: 2017-03-13 23:04 IST

ಹೊನ್ನಾವರ, ಮಾ.13: ತಾಲೂಕಿನ ಕರ್ಕಿಯ ಭೂಸ್ವರ್ಗ ಕೇರಿಯಲ್ಲಿ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಬುದ್ಧಿಮಾಂದ್ಯ ಬಾಲಕಿಯೊಂದಿಗೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.


ಕರ್ಕಿಯ ಸುಬ್ರಹ್ಮಣ್ಯ ರಾಮ ಭಂಡಾರಿ(52) ಅತಾ್ಯಚಾರಗೈದ ಆರೋಪಿ. ಈತ ಕರ್ಕಿಯ ಮೀನು ಮಾರುಕಟ್ಟೆಯ ಸಮೀಪ ನ್ಯೂರೂಪ್ ಎಂಬ ಹೆಸರಿನ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.


ಬಟ್ಟೆ ಹೊಲಿಸಲೆಂದು ಆತನ ಅಂಗಡಿಗೆ ಬರುತ್ತಿದ್ದ 17 ವರ್ಷದ ಬುದ್ಧಿಮಾಂದ್ಯ ಬಾಲಕಿಯನ್ನು ಆರೋಪಿ ಪುಸಲಾಯಿಸಿ 
ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಬಾಲಕಿಗೆ ಅನಾರೋಗ್ಯವಿರುವುದನ್ನು ಗಮನಿಸಿದ ಮನೆ ಯರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.


 ಈ ಸಂಬಂಧ ಬಾಲಕಿಯ ಹೆತ್ತವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆಯೇ ಆರೋಪಿ ಸುಬ್ರಹ್ಮಣ್ಯ ರಾಮ ಭಂಡಾರಿ ಅಂಗಡಿ ಮುಚ್ಚಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News