ಅಕ್ರಮ ಮರಳು ಸಾಗಾಟ: ಆರೋಪಿಗಳು ವಶಕ್ಕೆ
Update: 2017-03-13 23:13 IST
ಸುಂಟಿಕೊಪ್ಪ, ಮಾ.13: ಪಿಕ್‌ಅಪ್ ವಾಹನದಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಸಮೀಪದ ಮಾದಾಪುರದ ಹಟ್ಟಿಹೊಳೆಯಿಂದ ಹೊಸತೋಟದತ್ತ ಅಕ್ರಮ ಮರಳನ್ನು ಸಾಗಿಸುತ್ತಿರುವ ಮಾಹಿತಿಯನ್ನು ಪಡೆದುಕೊಂಡ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಪಿಕ್‌ಅಪ್ ವಾಹನ ಸೇರಿದಂತೆ ಅದರಲ್ಲಿದ್ದ ರಮಾನಂದ, ಸುರೇಶ್, ಉಣ್ಣಿಕೃಷ್ಣ, ಸುದೀನ ಎಂಬವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.