×
Ad

ಟೋಲ್‌ಗೇಟ್ ಸಿಬ್ಬಂದಿಗೆ ಬಿಜೆಪಿ ಶಾಸಕನಿಂದ ಹಲ್ಲೆ!

Update: 2017-03-14 15:31 IST

  ತುಮಕೂರು, ಮಾ.14: ಬಿಜೆಪಿ ಶಾಸಕ ಸುರೇಶ್ ಗೌಡ ಇಲ್ಲಿನ ಕ್ಯಾತಸಂದ್ರದಲ್ಲಿರುವ ಟೋಲ್ ಗೇಟ್‌ನ ಸಿಬ್ಬಂದಿಯೊಬ್ಬರಿಗೆ ಹಲ್ಲೆ ನಡೆಸಿ ದರ್ಪ ತೋರಿಸಿದ ಘಟನೆ ನಡೆದಿದೆ.

ಟೋಲ್ ಸಂಗ್ರಹದಲ್ಲಿ ತೊಡಗಿದ್ದ ಸಿಬ್ಬಂದಿಗಳು ಸ್ಥಳೀಯ ಶಾಸಕ ಸುರೇಶ್‌ಗೌಡ ಪ್ರಯಾಣಿಸುತ್ತಿದ್ದ ಕಾರನ್ನು ತಡೆದಿದ್ದರು. ಇದರಿಂದ ಕೋಪಗೊಂಡ ಶಾಸಕರು ಟೋಲ್ ಗೇಟ್ ಕಚೇರಿ ಒಳಗೆ ನುಗ್ಗಿ ಸಿಬ್ಬಂದಿ ಮಲ್ಲಿಕಾರ್ಜುನ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಟೋಲ್ ಗೇಟ್‌ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ವಿರುದ್ಧ ಹಲ್ಲೆ ಆರೋಪ ಹೊರಿಸಿ ಟೋಲ್ ಸಿಬ್ಬಂದಿ ಮಲ್ಲಿಕಾರ್ಜುನ್  ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News