ಅಬಕಾರಿ ದಾಳಿ: ಓರ್ವನ ಬಂಧನ
Update: 2017-03-14 18:18 IST
ಮೂಡಿಗೆರೆ, ಮಾ.14: ಕಳ್ಳಬಟ್ಟಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು, ಓರ್ವನನ್ನು ಬಂಧಿಸಿ ಕಳ್ಳಬಟ್ಟಿ ಹಾಗೂ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.
ಬಣಕಲ್ ಹೋಬಳಿ ತ್ರಿಪುರ ಗ್ರಾಮದದಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದ ಮನೆಯೊಂದರೆ ಮೇಲೆ ದಾಳಿ ನಡೆಸಿ 2 ಲೀಟರ್ ಕಳ್ಳಬಟ್ಟಿ ಸರಾಯಿ, 55 ಲೀಟರ್ ಬೆಲ್ಲದ ಕೊಳೆ ಹಾಗೂ ತಯಾರಿಕಾ ಪರಿಕರಗಳನ್ನು ವಶಪಡಿಸಿಕೊಂಡ ಅಬಕಾರಿ ಪೊಲೀಸರು, ರತೀಶ್ ಎಂಬಾತನನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರಿ ಪಡಿಸಿದರು.
ದಾಳಿಯಲ್ಲಿ ಅಬಕಾರಿ ಪೊಲೀಸ್ ಉಪಾದೀಕ್ಷಕ ಕೆ.ಜಿ.ಸಂತೋಷ್, ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.