ಸಿ.ಇ.ಟಿ. ಅರ್ಜಿ ಸರಿಪಡಿಸಿಕೊಳ್ಳಲು ಅವಕಾಶ
ಮೂಡಿಗೆರೆ, ಮಾ.14: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2017ರ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ತಪ್ಪು ಆಪ್ಷನ್‌ಗಳಿಂದ ಗೊಂದಲಗೊಂಡು ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ತಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಇನ್ನೊಮ್ಮೆ ತೆರೆದು ಸರಿಪಡಿಸಿಕೊಳ್ಳಲು ಪ್ರಾಧಿಕಾರ ಅವಕಾಶ ನೀಡಿದೆ.
ಆನ್‌ಲೈನ್ ಅರ್ಜಿಯ ಕೆಲ ಆಪ್ಷನ್‌ಗಳಲ್ಲಿ ತಪ್ಪು ಅಂಶಗಳಿದ್ದರಿಂದ ಸರಿಪಡಿಸಬೇಕೆಂದು, ಸಲ್ಲಿಸಿರುವ ಅರ್ಜಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕೆಂದು ಎಂದು ಅರ್ಜಿದಾರರು ಆಗ್ರಹಿಸಿದ್ದರು. ಈ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ ಪೆ.19ರಂದು ಸಮಗ್ರ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಪ್ರಾಧಿಕಾರ ಮಾ.14ರ ಸಂಜೆಯಿಂದ ಆನ್‌ಲೈನ್‌ನಲ್ಲಿ ಎಡಿಟ್ ಆಪ್ಸನ್ ನೀಡಿದೆ. ವಿದ್ಯಾರ್ಥಿಗಳು ಲಾಗಿನ್ ಐಡಿ ಬಳಸಿ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ನಮೂದಿಸುವ ಮೂಲಕ ಅರ್ಜಿಯನ್ನು ತೆರೆದು ನಮೂದಿಸಿರುವ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.