×
Ad

ಎಸ್‌.ಎಂ. ಕೃಷ್ಣ ಅವರ ಗನ್ ಮ್ಯಾನ್ ವಾಪಾಸ್

Update: 2017-03-15 09:57 IST

ಬೆಂಗಳೂರು, ಮಾ.15: ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯ ಹಾದಿಯಲ್ಲಿರುವ ಮಾಜಿ ಮುಖ್ಯ ಮಂತ್ರಿ ಎಸ್‌.ಎಂ.ಕೃಷ್ಣ ಅವರ ಗನ್ ಮ್ಯಾನ್ ನ್ನು ರಾಜ್ಯಸರಕಾರ ಹಿಂದಕ್ಕೆ ಪಡೆದಿದೆ.
 ರಾಮಲೀಂಗೇ ಗೌಡ ಕಳೆದ ಇಪ್ಪತ್ತು ವರ್ಷಗಳಿಂದ ಕೃಷ್ಣ ಅವರ ಅಂಗರಕ್ಷರಾಗಿದ್ದರು. 
ರಾಮಲೀಂಗೇ ಗೌಡ ಅವರು ಅಂಗರಕ್ಷಕ ಹುದ್ದೆಯಿಂದ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಕೃಷ್ಣ ಅವರು ಅಂಗರಕ್ಷಕರು ಇಲ್ಲದೆ ಓಡಾಡುವಂತಾಗಿದೆ.
 ಕೇಂದ್ರ ವಿಭಾಗದಿಂದ ಗನ್ ಮ್ಯಾನ್ ನಿಯೋಜನೆಗೆ ಸೂಚಿಸಲಾಗಿದ್ದರೂ, ಈ ಆದೇಶ ಅನುಷ್ಠಾನಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News