ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಉದ್ಯೋಗ. : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ.15: ಮುಖ್ಯ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ರಾಜ್ಯ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಿದರು
ಇದು ರಾಜ್ಯ ಸರಕಾರದ ಐದನೆ ಬಜೆಟ್ ಮತ್ತು ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಮಂಡಿಸಿದ 12ನೆ ಬಜೆಟ್ ಆಗಿದೆ.
ಬಜೆಟ್ ನ ಮುಖ್ಯಾಂಶಗಳು
*ಅಭಿವೃದ್ಧಿಯ ಮಾದರಿಯೇ ಸರಕಾರದ ಸಾಧನೆಯಾಗಿದೆ: ಸಿಎಂ ಸಿದ್ದರಾಮಯ್ಯ
* 6 ಮೆಡಿಕಲ್ ಕಾಲೇಜು, 5 ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ.
* 5 ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ: ದಾವಣಗೆರೆ, ತುಮಕೂರು, ವಿಜಯಪುರ,ಕೋಲಾರ
*ಚಿತ್ರದುರ್ಗ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ.
* ರಾಜ್ಯದಲ್ಲಿ ಅಮ್ಮಾ ಕ್ಯಾಂಟಿನ್ ಮಾದರಿಯಲ್ಲಿ ನಮ್ಮ ಕ್ಯಾಂಟಿನ್. ಬೆಂಗಳೂರಿನಲ್ಲಿ 198 ನಮ್ಮ ಕ್ಯಾಂಟಿನ್ . 5 ರೂಗೆ.ಬೆಳಗ್ಗಿನ ತಿಂಡಿ, 10 ರೂ.ಗೆ ಮಧ್ಯಾಹ್ನ, ರಾತ್ರಿ ಊಟ. ಈ ಯೋಜನೆ 100 ಕೋಟಿ ರೂ. ಅನುದಾನ
* ಅನ್ನ ಭಾಗ್ಯ ಅಕ್ಕಿ: ಪ್ರತಿ ಕುಟುಂಬಕ್ಕೆ ಅಕ್ಕಿ 5 ಕೆ.ಜಿಯಿಂದ 7 ಕೆ.ಜಿ. ಏರಿಕೆ.ಅನ್ನಭಾಗ್ಯದ ಅಕ್ಕಿ ಕುಟಂಬಕ್ಕೆ 35ಕೆಜಿಗೆ ಏರಿಕೆ
*ರೈತರ ಸಾಲ ಮನ್ನಾ ಇಲ್ಲ , ಸಾಲ ಮರುಪಾವತಿ ಅವಧಿ ವಿಸ್ತರಣೆ. ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ತನಕ ಅಲ್ಪಾವಧಿ ಸಾಲ.
* ಶೇ 3 ಬಡ್ಡಿ ದರದಲ್ಲಿ 10 ಲಕ್ಷ ರೂ ಕೃಷಿ ಸಾಲ.
*21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ಘೋಷಣೆ
*ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ,ಕಾಪು ಹೊಸ ತಾಲೂಕುಗಳಾಗಿ ಘೋಷಣೆ. ಕನ್ನಡ ಜಿಲ್ಲೆಯ ಮೂಡಬಿದಿರೆ, ಕಡಬ ಹೊಸ ತಾಲೂಕುಗಳಾಗಿ ಘೋಷಣೆ.
*ಕ್ಷೀರ ಭಾಗ್ಯ ಯೋಜನೆಯಡಿ 5 ದಿನ ಹಾಲು ವಿತರಣೆ
* ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ
*ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ 145 ಚಿಕಿತ್ಸಾ ಘಟಕ
*ಒಂದನೇ ತರಗತಿಯಿಂದಲೇ ಇಂಗ್ಲಿಷ್ ಶಿಕ್ಷಣ ಬೋಧನೆ.
*ರಾಜ್ಯದ ಗ್ರಾಮೀಣ ಭಾಗಗಳಲ್ಲಿ ತಲಾ 4 ಕೋಟಿ ರೂ. ವೆಚ್ಚದಲ್ಲಿ 25 ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
*ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಮೂಲಕ ಸವಿರುಚಿ ಸಂಚಾರಿ ಕ್ಯಾಂಟಿನ್.
*ಖಾಸಗಿ ಸಂಸ್ಥೆಗಳಲ್ಲಿ ಎಸ್ಸಿ -ಎಸ್ಟಿ ಕಾರ್ಮಿಕರಿಗೆ ಉದ್ಯೋಗ
*ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮವಾಹಿನಿ ಯೋಜನೆ ಜಾರಿ.
*ಗ್ರಾಮೀಣ ಪ್ರದೇಶಗಳಲ್ಲಿ 2500 ಶುದ್ಧ ಕುಡಿಯುವ ನೀರಿನ ಘಟಕ. 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ.
*ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ.
*ವಿಶ್ವ ಕನ್ನಡ ಆಯೋಜನೆಗೆ 20 ಕೋಟಿ ರೂ.
*ಬೆಂಗಳೂರು ಒನ್ ಮಾದರಿಯಲ್ಲಿ ಕರ್ನಾಟಕ ಒನ್ . 9 ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಆರಂಭ.
* ರಾಜ್ಯದಲ್ಲಿ ನೀರಾ ನೀತಿ ಜಾರಿ, ಅಬಕಾರಿ ಕಾಯ್ದೆಗೆ ತಿದ್ದುಪಡಿ
* ಬರಪ್ರದೇಶಗಳಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ.
* ರಾಜ್ಯದ ಎಲ್ಲ ಗ್ರಾ.ಪಂ.ಗಳಳ್ಲಿ ಉಚಿತ ವೈಫೈ
*ನೀರಿನ ಟ್ಯಾಂಕ್ ಖರೀದಿಸುವ ರೈತರಿಗೆ 50 ಸಾವಿರ ರೂ. ಸಹಾಯಧನ.
* ಕಾರವಾರ, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ವಿಮಾನ ಇಳಿದಾಣಗಳ ನಿರ್ಮಾಣ.
* ರಾಜ್ಯದಲ್ಲಿ ಪ್ರತಿ ಮಾಂಸದಂಗಡಿಗೆ 1.25 ಲಕ್ಷ ರೂ. ಸಹಾಯಧನ.
* 10 ಸಾವಿರ ಉತ್ಕೃಷ್ಟ ಟಗರು ಉತ್ಪಾದನಾ ಘಟಕ.
*ಬಿಪಿಎಂಪಿ ವ್ಯಾಪ್ತಿಯಲ್ಲಿ 43 ರಸ್ತೆಗಳ ಅಭಿವೃದ್ಧಿ.
*690 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಮೇಲ್ದರ್ಜೆಗೆ.
*ಟೆಂಡರ್ ಶ್ಯೂರ್ ಮಾದರಿಯಲ್ಲಿ 25 ಕಿ.ಮೀ ರಸ್ತೆ ಅಭಿವೃದ್ಧಿ.
* 10 ಸಾವಿರ ಆಟೋ ರಿಕ್ಷಾಗಳ ಖರೀದಿಗೆ ಸಹಾಯಧನ.
* 2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ.
*ಅಪಘಾತದಲ್ಲಿ ಹಸು, ಎತ್ತು ಸಾವನ್ನಪ್ಪಿದರೆ 10 ಸಾವಿರ ರೂ. ಸಹಾಯಧನ.
*8ರಿಂದ 10ನೆ ತರಗತಿ ವಿದ್ಯಾರ್ಥಿನಿಯರಿಗೆ ಚೂಢಿದಾರ.
*ಶ್ರವಣ ಬೆಳಗೋಳ ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರೂ.ಅನುದಾನ
*ದ್ವಿಚಕ್ರ ವಾಹನ ಕೊಳ್ಳುವರರಿಗೆ ಬರೆ.
*ನಮ್ಮ ಮೆಟ್ರೋ ಹೆಚ್ಚುವರಿ ಮಾರ್ಗಗಳ ನಿರ್ಮಾಣ.
*4,200 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಮಾರ್ಗಗಳ ನಿರ್ಮಾಣ
*1,626 ಪ್ರೌಢಶಾಲಾ ಶಿಕ್ಷಕರ ನೇಮಕ.
*ಪ್ರೌಢಶಿಕ್ಷಣ ಇಲಾಖೆಗೆ 18, 266 ಕೋಟಿ ರೂಪಾಯಿ ಮೀಸಲು.
2 ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ.
*ಹನಿ ನೀರಾವರಿ ಅಳವಡಿಸಲು ಶೇ 90ರಷ್ಟು ರಿಯಾಯತಿ.
*ಬೆಂಗಳೂರು ಸಬ್ ಅರ್ಬನ್ ರೈಲ್ವೇ ಯೋಜನೆಗೆ 345 ಕೋಟಿ ರೂ.
*ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆ.
*ರಾಯಚೂರಿನಲ್ಲಿ ಹೊಸ ವಿವಿ ಸ್ಥಾಪನೆ.
*ಪರಿಸರ ಸಂಶೋಧನೆಗೆ ಪೂರ್ಣಚಂದ್ರ ತೇಜಸ್ವಿನಿ ಪ್ರತಿಷ್ಠಾನ. ಪ್ರತಿಷ್ಠಾನಕ್ಕೆ 5 ಕೋಟಿ ರೂ. ಅನುದಾನ
* ಉಚಿತವಾಗಿ ನೀಡುತ್ತಿರುವ ವಿದ್ಯುತ್ ಪ್ರಮಾಣ ಹೆಚ್ಚಳ
*1.5 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
*ಎಪಿಎಂಪಿಸಿಯಲ್ಲಿ ವೈಜ್ಞಾನಿಕವಾಗಿ ಹಣ್ಣು ಮಾಗಿಸುವ ವ್ಯವಸ್ಥೆಗೆ 10 ಕೋಟಿ ಮೀಸಲು.
*ರಾಜ್ಯದ ಗ್ರಾಮೀಣ ಭಾಗಗಳಲ್ಲಿ ತಲಾ 4 ಕೋಟಿ ರೂ. ವೆಚ್ಚದಲ್ಲಿ 25 ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
*ನಿವೃತ್ತ ಪತ್ರಕರ್ತರ ಮಾಸಾಶನ 8 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳ. ಜಿಲ್ಲಾ ಕೇಂದ್ರಗಳಲ್ಲಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್.
*ಹೆಬ್ಬಾಳ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಾಣ.
*ಮೇಲ್ವೆತುವೆ ಅಗಲೀಕರಣಕ್ಕೆ 88 ಕೋಟಿ ರೂ.
*ಕರ್ನಾಟಕ ಶಾಲಾ ನೀತಿ ಜಾರಿಗೆ ತರಲು ನಿರ್ಧಾರ.
*ಪೌಷ್ಠಿಕಾಂಶ ಕೊರತೆ ನಿವಾರಣಗೆ ಮಾತೃಪೂರ್ಣ ಯೋಜನೆ - ಈ ಯೋಜನೆಗೆ 302 ಕೋಟಿ ರೂ.-ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ಬಿಸಿಯೂಟ.
* ಬಂಟ್ವಾಳ, ಚಿಂತಾಮಣಿ, ರಾಣೆ ಬೆನ್ನೂರು ನಲ್ಲಿ ಹೊಸ ಎಆರ್ ಟಿಒ ಕಚೇರಿ
* ಶಬರಿಮಲೆಯಲ್ಲಿ ಕರ್ನಾಟಕದ ಉಪಕಚೇರಿ- ರಾಜ್ಯದ ಯಾತ್ರಾರ್ಥಿಗಳಿಗೆ ವೈದ್ಯಕೀಯ, ಸಹಾಯವಾಣಿ, ರಕ್ಷಣಾ ಸೌಲಭ್ಯ.
* 4023 ಗ್ರಾಮ ಪಂಚಾಯತ್ ಗಳಲ್ಲಿ ಬಾಪೂಜಿ ಸೇವಾ ಕೇಂದ್ರ.
*10 ವಸತಿಯುಕ್ತ ಎಸ್ಸಿ, ಎಸ್ಟಿ ವಸತಿಯುಕ್ತ ಪ್ರಥಮದರ್ಜೆ ಕಾಲೇಜುಗಳ ಸ್ಥಾಪನೆ
*ಉನ್ನತ ಶಿಕ್ಷಣಕ್ಕೆ 4401 ಕೋಟಿ, ವೈದ್ಯಕೀಯ ಶಿಕ್ಷಣಕ್ಕೆ 2004 ಕೋಟಿ,
*ಸಮಾಜ ಕಲ್ಯಾಣಕ್ಕೆ 6363 ಕೋಟಿ
*ವಸತಿ 4708 ಕೋಟಿ
*ಮೀನುಗಾರಿಕೆಗೆ 337 ಕೋಟಿ ಅನುದಾನ.
*16, 500 ನರ್ಸ್ ಗಳಿಗೆ ಕಂಪ್ಯೂಟರ್ ಟ್ಯಾಬ್ . ಆರೋಗ್ಯಕರ, ಪರಿಸರ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಲು ಬಾಡಿಗೆ ಸೈಕಲ್ ಒದಗಿಸುವ ಯೋಜನೆ ಜಾರಿ.
*ಎಲ್ಲಾ ಇಎಸ್ಐ ಆಸ್ಪತ್ರೆಗಳಲ್ಲಿ ಆಯೂಷ್ ವಿಭಾಗ ಆರಂಭ.
*ಭಾಗ್ಯಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ 18 ಯೂನಿಟ್ ನಿಂದ 40 ಯೂನಿಟ್ ಗೆ ಏರಿಕೆ.
*ಒಲಿಂಪಿಕ್ಸ್ ಪದಕ ವಿಜೇತರಿಗೆ ಎ ದರ್ಜೆ ಹುದ್ದೆ.
*ಏಷ್ಯನ್ ಮತ್ತು ಕಾಮನ್ ವೆಲ್ತ್ ಪದಕ ವಿಜೇತರಿಗೆ ಬಿ ದರ್ಜೆ ಹುದ್ದೆ.
*ಒಲಿಂಪಿಕ್ ಸ್ವರ್ಣ ವಿಜೇತರಿಗೆ 5 ಕೋಟಿ ಬಹುಮಾನ, ಬೆಳ್ಳಿ ವಿಜೇತರಿಗೆ 3 ಕೋಟಿ, ಕಂಚು ವಿಜೇತರಿಗೆ 2 ಕೋಟಿ ರೂ. ಬಹುಮಾನ.
*ವೃದ್ಧಾಪ್ಯ ವೇತನ 200 ರಿಂದ 500 ರುಪಾಯಿಗೆ ಹೆಚ್ಚಳ.
*ಗ್ರಾಮ, ತಾ.ಪಂ, ಜಿ.ಪಂ ಸದಸ್ಯರ ಗೌರವ ಧನ ಹೆಚ್ಚಳ.
ತಾಪಂ ಅಧ್ಯಕ್ಷರ ಗೌರವಧನ 4.5ರಿಂದ 6 ಸಾವಿರಕ್ಕೆ ಏರಿಕೆ.
*ಜಿಪಂ ಸದಸ್ಯರ ಗೌರವಧನ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ.
*ತಾಲೂಕು ಪಂಚಾಯ್ತಿ ಸದಸ್ಯರ ಗೌರವಧನ 3 ಸಾವಿರ
* ಗ್ರಾ.ಪಂ ಸದಸ್ಯರ ಗೌರವಧನ 1 ಸಾವಿರಕ್ಕೆ ಏರಿಕೆ.
*. ಭಾರತ ಭಾಗ್ಯವಿದಾತ ಧ್ವನಿ ಬೆಳಕು ಯೋಜನೆ.
*ಗೇರು ಅಭಿವೃದ್ಧಿ ಮಂಡಳಿ ಸ್ಥಾಪನೆ.
*ಕೆಎಸ್ ಆರ್ ಟಿಸಿಗೆ 3,250 ಹೊಸ ಬಸ್ ಸೇರ್ಪಡೆ.
*ಬೆಂಗಳೂರು ನಗರಕ್ಕೆ 150 ಎಲೆಕ್ಟ್ರಿಕ್ ಬಸ್.
*ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ. ಪೊಲೀಸ್ ತರಬೇತಿ ಶಾಲೆಗಳ ಬಲವರ್ಧನೆಗೆ 10 ಕೋಟಿ ಅನುದಾನ.
*ರಾಜ್ಯದಲ್ಲಿ 1,000 ಪ್ರೌಢಶಾಲೆ
* ಬೆಂಗಳೂರನ್ನು ವಿದ್ಯೂತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ರೂಪಿಸಲು ಚಿಂತನೆ.
*ಬೆಂಗಳೂರಿನ ಐಐಐಟಿಯಲ್ಲಿ ರೋಬೋಟಿಕ್ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ.
* ಖಾದಿ, ಗ್ರಾಮೋದ್ಯಮ ಉತ್ತೇಜನಕ್ಕೆ 4 ಕೋಟಿ ರೂ.
* ಕೇಂದ್ರ ಸರಕಾರದ ನೆರವಿನೊಂದಿಗೆ ರಾಜ್ಯದ ಎರಡು ಕಡೆ ಖಾದಿ ಪ್ಲಾಜಾ ಸ್ಥಾಪನೆ
* ರಾಜ್ಯ ಸರಕಾರದಿಂದ 50 ‘ಸಾಲು ಮರದ ತಿಮ್ಮಕ್ಕ’ ವೃಕ್ಷ ಪಾರ್ಕ್ ಅಭಿವೃದ್ಧಿ
* ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ವಿುನಲ್ ನಿರ್ವಣಕ್ಕೆ ಕ್ರಮ
*ಬೆಂಗಳೂರಿನಲ್ಲಿ ವಾಯು, ಶಬ್ದ ಮಾಲಿನ್ಯ ತಡೆಗೆ ಕ್ರಮ. ಬೆಂಗಳೂರಿನ ಸಬ್ ಅರ್ಬನ್ ರೈಲ್ವೆ ಯೋಜನೆಗೆ 345 ಕೋಟಿ.
*ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ 10 ಕೋಟಿ ರುಪಾಯಿ ಅನುದಾನ. ತೋಟಗಾರಿಕೆ ಇಲಾಖೆಗೆ 1091 ಕೋಟಿ ಅನುದಾನ.
*ಸರಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ಆಯೋಗ ರಚನೆ
*ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಉದ್ಯೋಗ. ಸಿ, ಡಿ ಗುಂಪಿನ ನೌಕರರಿಗೆ ಅನ್ವಯ.
*