ಬಜೆಟ್-2017: ''ನಮ್ಮ ಕ್ಯಾಂಟೀನ್" ವಿಶೇಷತೆಗಳೇನು?
Update: 2017-03-15 18:15 IST
ಬೆಂಗಳೂರು, ಮಾ.15: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರಾಭಿವೃದ್ಧಿ ಯೋಜನೆ ಅಡಿಯಲ್ಲಿ ''ನಮ್ಮ ಕ್ಯಾಂಟೀನ್" ಆರಂಭವಾಗಲಿದೆ.
ಜನಸಾಮನ್ಯರಿಗೆ ಊಟ ಮತ್ತು ಉಪಹಾರವನ್ನು ಕೈಗೆಟಕುವ ದರದಲ್ಲಿ ಒದಗಿಸಲು "ನಮ್ಮ ಕ್ಯಾಂಟೀನ್ ಎಂಬ ವಿನೂತನ ಯೋಜನೆ ಜಾರಿಯಾಗಲಿದೆ. ಬೆಂಗಳೂರು ಮಹಾ ನಗರ ಪಾಲಿಕೆಯ 198 ವಾರ್ಡ್ ಗಳಲ್ಲಿ ತಲಾ ಒಂದು ಕ್ಯಾಂಟೀನ್ ಪ್ರಾರಂಭವಾಗಲಿದೆ. ಇದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ.
''ನಮ್ಮ ಕ್ಯಾಂಟೀನ್" ಯೋಜನೆಯಡಿ 5 ರೂಪಾಯಿಗೆ ತಿಂಡಿ ಹಾಗೂ 10 ರುಪಾಯಿಗೆ ಊಟ ದೊರೆಯಲಿದೆ.