×
Ad

ಕರ್ನಾಟಕ ಬಜೆಟ್-2017: ವಿದ್ಯಾರ್ಥಿಗಳ ಪ್ರೇರಣೆಗೆ ಕೈಗೊಳ್ಳಲಾದ ಕ್ರಮಗಳೇನು?

Update: 2017-03-15 20:42 IST

ಬೆಂಗಳೂರು, ಮಾ.15: ಈ ಸಲದ ಬಜೆಟ್ ನಲ್ಲಿ 8ರಿಂದ 10ನೇ ತರಗತಿಯ ಹೆಣ್ಣು ಮಕ್ಕಳಿಗೆ ಚೂಡಿದಾರ್ ಸಮವಸ್ತ್ರವನ್ನು ಯೋಜನೆಯನ್ನು ಜಾರಿಗೆ ತರಲಾಗಿದೆ. 

ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದ ವ್ಯವಸ್ಥೆಯಲ್ಲಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ(Fortified Rice) ನೀಡಲು 4 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿದೆ. ಜುಲೈ ತಿಂಗಳಿನಿಂದ ವರದಲ್ಲಿ 5 ದಿನ ಹಾಲು ವಿತರಣೆ ಮಾಡಲಾಗುವುದು ಎಂದು ಘೋಷಿಸಲಾಗಿದೆ.  ಅದಲ್ಲದೆ, ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆ ಮಾಡಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳ ದೃಷ್ಟಿ ಪರೀಕ್ಷೆಯನ್ನು ಮಾಡಿ ಕನ್ನಡಕಗಳ ವಿತರಣೆ ಮಾಡಲಾಗುವುದು

50 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಮುಖ ವಿಷಯಗಳಲ್ಲಿ ಮಧ್ಯಮ ಮತ್ತು ದೀರ್ಘ ಅವಧಿಯ ಅವಶ್ಯಾಧಾರಿತ ಪುನರ್ರಚನ ತರಬೇತಿ ನೀಡಲಾಗುವುದು. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳ ಸಾಮರ್ಥ್ಯ ವರ್ಧನೆಗೆ ಕ್ರಮ ವಹಿಸಲಾಗಿದೆ. 

ಪ್ರಾಥಮಿಕ ಶಾಲೆಗಳಿಗೆ 10,000 ತರಬೇತಿ ಪಡೆದ ಪದವೀಧರ ಶಿಕ್ಷಕರು, 1,686  ಪ್ರೌಢ ಶಾಲಾ ಶಿಕ್ಷಕರು, ಹಾಗೂ 1,191 ಪಿಯು ಉಪನ್ಯಾಸಕರನ್ನು ಎರಡು ಹಂತದಲ್ಲಿ ನೇಮಕಾತಿ ಮಾಡಲು ಯೋಜನೆಗಳನ್ನು ಹಮ್ಮಿಕೊಂಡಿದೆ.

 50 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಮುಖ ವಿಷಯಗಳಲ್ಲಿ ಮಧ್ಯಮ ಮತ್ತು ದೀರ್ಘ ಅವಧಿಯ ಅವಶ್ಯಾಧಾರಿತ ಪುನರ್ರಚನಾ ತರಬೇತಿ; ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಾಮರ್ಥ್ಯ ವರ್ಧನೆಗೆ ಕ್ರಮ. ಪ್ರಾಥಮಿ  ಶಾಲೆಗಳಿಗೆ 10,000 ತರಬೇತಿ ಪಡೆದ ಪದವೀಧರ ಶಿಕ್ಷಕರು, 1,626 ಪ್ರೌಢ ಶಾಲಾ ಶಿಕ್ಷಕರು ಮತ್ತು 1,191 ಪಿ.ಯು. ಉಪನ್ಯಾಸಕರನ್ನು ಎರಡು ಹಂತಗಳಲ್ಲಿ ನೇಮಕಾತಿ.  ಶಾಲಾ ನಿರ್ವಹ ೆ ಮತ್ತು ಶಿಕ್ಷಣ ವಲಯದ ಆಡಳಿತ ಸುಧಾರ ೆಗಾಗಿ, ಶಿಕ್ಷಣ ಕಿರಣದಡಿ ಶಿಕ್ಷಕರ ಬಯೋಮೆಟ್ರಿಕ್ ಹಾಜರಾತಿಯೂ ಸೇರಿದಂತೆ ತಂತ್ರಜ್ಞಾನದ ಸಮರ್ಥ ಬಳಕೆ.

ಉನ್ನತ ಶಿಕ್ಷಣ

ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಂ ು, ಇಂಜಿನಿಯರಿಂಗ್, ಪಾಲಿ ೆಕ್ನಿಕ್ ಮತ್ತು ಪ್ರಥಮದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರ ೆ; 1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News