×
Ad

​ವೇಶ್ಯಾವಾಟಿಕೆ: ಮೈಸೂರಿನ ಯುವಕರ ಬಂಧನ

Update: 2017-03-15 23:00 IST

ಕುಶಾಲನಗರ, ಮಾ.15: ಪಟ್ಟಣದ ಖಾಸಗಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿಯನ್ನು ಆಧಾರಿಸಿ ದಾಳಿ ನಡೆಸಿದ ಠಾಣಾಧಿಕಾರಿ ಜಗದೀಶ ನೇತೃತ್ವದ ತಂಡ ಮೈಸೂರಿನ ಇಬ್ಬರು ಯುವಕರನ್ನು ಬಂಧಿಸಿದೆ.

ಮೈಸೂರಿನ ಬೋಗಾದಿಯ ನಿವಾಸಿಯಾದ ವಿಜಯ್‌ಕುಮಾರ್ ಯೋಗೇಶ್(33) ಮತ್ತು ರಾವಂದೂರು ನಿವಾಸಿ ಪ್ರೇಮ್ ಕುಮಾರ್(23) ಆರೋಪಿಗಳಾಗಿದ್ದಾರೆ. ಇವರು ಮೈಸೂರು ಮೂಲದ ಮೂರು ಯುವತಿಯರನ್ನು ತಂದು ಕುಶಾಲನಗರದ ಖಾಸಗಿ ಲಾಡ್ಜ್ ನಲ್ಲಿ ಮೂರು ಕೊಠಡಿಗಳನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಮಾಹಿತಿ ಅರಿತು ತಕ್ಷಣ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News