×
Ad

‘ಜಾತಿ ಪದ್ಧತಿ ಜೀವಂತ ಇರುವಲ್ಲಿ ಸಾಮರ್ಥ್ಯ ಸೀಮಿತ’

Update: 2017-03-16 00:41 IST

ಬೆಂಗಳೂರು, ಮಾ. 15: ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ರಾಷ್ಟ್ರಕವಿ ಕುವೆಂಪು ಅವರು ಕಾವ್ಯದ ಝರಿಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಾಲ್ಕು ವರ್ಷಗಳ ಸಾಧನೆಯ ಬೆಳಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

 ‘ಎಲ್ಲಿ ಜಾತಿ ಪದ್ಧತಿ ಜೀವಂತವಾಗಿರುತ್ತದೆಯೋ, ಅಲ್ಲಿ ಅವಕಾಶಗಳು ಮತ್ತು ಸಾಮರ್ಥ್ಯಗಳು ಸೀಮಿತಗೊಳ್ಳುತ್ತವೆ’ ಎಂಬ ಡಾ. ರಾಮಮನೋಹರ ಲೋಹಿಯಾರ ಮಾತನ್ನು ಉಲ್ಲೇಖಿಸಿರುವ ಸಿಎಂ ಸಿದ್ದರಾಮಯ್ಯ ಸಮಾಜ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿನ ಯೋಜನೆಗಳನ್ನು ಘೋಷಿಸಿದರು. ‘ಹಳ್ಳಿಗಳು ನಮ್ಮ ಭಾರತದ ಜೀವಾತ್ಮಗಳು, ಹಳ್ಳಿಗಳ ಅಭಿವೃದ್ಧಿಯಾಗದೆ, ಭಾರತದ ಅಭಿವೃದ್ಧಿ ಕನಸಿನ ಮಾತು’ ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮಾತಿನ ಉಲ್ಲೇಖದೊಂದಿಗೆೆ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧ್ದಿ ಇಲಾಖೆ ಆಯವ್ಯಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News