ಡ್ರಗ್ಸ್ ವ್ಯಸನಿ ಮೊಮ್ಮಗಳಿಂದ ತಾತ, ಅಜ್ಜಿಯ ಜೀವಂತ ದಹನ ಯತ್ನ
ಮೈಸೂರು,ಮಾ.16: ಮಾದಕದ್ರವ್ಯ ವ್ಯಸನಿಯಾಗಿದ್ದ ತನಗೆ ಬುದ್ಧಿ ಹೇಳಿದ ತಾತ ಅಜ್ಜಿಯ ಮೇಲೆ ಹಲ್ಲೆ ನಡಿಸಿದ ಮೊಮ್ಮಗಳು, ಮನೆಗೆ ಬೆಂಕಿ ಹಚ್ಚಿ ಅವರ ಸಜೀವದಹನಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ.
ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮಿಕಾಂತ ನಗರದ ನಿವಾಸಿ, 85ರ ವಯಸ್ಸಿನ ಸೋಮಸುಂದರ್ ಹಾಗೂ ಲೀಲಾವತಿ ದಂಪತಿಯ ಮೊಮ್ಮಗಳು ಪ್ರಿಯದರ್ಶಿನಿ (22) ಎಂಬವಳೇ ಈ ದುಷ್ಕೃತ್ಯ ನಡೆಸಿದವಳಾಗಿದ್ದಾಳೆ. ಮಾಡೆಲಿಂಗ್ ವೃತ್ತಿಯಲ್ಲಿರುವ ಆಕೆ ಮಾದಕದ್ರವ್ಯದ ಚಟಕ್ಕೆ ತುತ್ತಾಗಿದ್ದಳು. ಪ್ರತಿದಿನವೂ ಈಕೆ ಅಜ್ಜಿ-ತಾತರಿಗೆ ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದಳೆನ್ನಲಾಗಿದೆ. ಈ ವಿಷಯ ತಿಳಿದ ಅಜ್ಜ, ಅಜ್ಜಿ ಗುರುವಾರ ಮೊಮ್ಮಗಳಿಗೆ ಬುದ್ಧಿವಾದ ಹೇಳಿದ್ದರು.
ಇದರಿಂದ ರೊಚ್ಚಿಗೆದ್ದ ಆಕೆ ಗುರುವಾರ ಮಧ್ಯಾಹ್ನ ಆಕೆ ಇಂದು ನಿಮ್ಮನ್ನು ಸಾಯಿಸುತ್ತೇನೆ ಎಂದು ಹೇಳಿ ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ಆಕೆಯ ತಂದೆ ವಿಚ್ಛೇದನ ಪಡೆದ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಿಯುಸಿಯಲ್ಲಿ ಅನುತ್ತೀರ್ಣಳಾದ ಈಕೆ ಬಿಎಲ್ ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತಿತಿದ್ದ ಅಜ್ಜಿ-ತಾತನ ಜೊತೆ ವಾಸವಿದ್ದಳು ಎನ್ನಲಾಗಿದೆ. ಗುರುವಾರ ಮಧ್ಯಾಹ್ನದ ವೇಳೆ ಅಜ್ಜಅಜ್ಜಿಯನ್ನು ಮನೆಯೊಳಗೆ ಕೂಡಿ ಹಾಕಿ, ಅವರನ್ನು ಮನೆಯೊಳಗೆ ಬೆಂಕಿಹಚ್ಚಿ ಸುಡಲು ಯತ್ನಿಸಿದ್ದಳು. ಮನೆಯ ಮುಂದುಗಡೆ ಇದ್ದ ಉಯ್ಯಿಲೆಗೆ ಬೆಂಕಿ ಹಚ್ಚಿದ್ದಳು. ಆ ಬೆಂಕಿ ಮನೆಯನ್ನೆಲ್ಲ ಆವರಿಸುವುದಕ್ಕೆ ಮೊದಲೇ ಅಕ್ಕಪಕ್ಕದವರು ಪೊಲೀಸರಿಗೆ ಹಾಗೂ ಅಗ್ನಿ ಶಾಮಕದಳದವರಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಹೆಬ್ಬಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಮನೆಯೊಳಗಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ್ದಾರೆ. ಪ್ರಿಯದರ್ಶಿನಿ ೆ. ಕುಡಿತ, ಡ್ರಗ್ಸ್ ಚಟಗಳನ್ನೂ ಮೈಗೂಡಿಸಿಕೊಂಡಿದ್ದು, ಅಸಭ್ಯವಾಗಿ ವರ್ತಿಸುತ್ತಾಳೆ ಹಾಗೂಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿರುತ್ತಾಳೆ ಎಂದು ಸ್ಥಳೀಯರು ದೂರಿದ್ದಾರೆ. ಪ್ರಿಯದರ್ಶಿನಿ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.