×
Ad

ಅಕಾಲಿಕ ಮಳೆಗೆ ತೊಗರಿ ದಾಸ್ತಾನಿಗೆ ತೊಂದರೆ

Update: 2017-03-16 21:57 IST

ಮುದ್ದೇಬಿಹಾಳ, ಮಾ.16: ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಕೇಂದ್ರ ಸರಕಾರದ ತೊಗರಿ ಖರೀದಿ ಕೇಂದ್ರಕ್ಕೆ ಮಾರಾಟಕ್ಕೆಂದು ತಂದಿದ್ದ ಕೆಲವು ತೊಗರಿ ಚೀಲಗಳಿಗೆ ಮಳೆ ನೀರು ತಗುಲಿ ತೊಂದರೆಯಾದ ಘಟನೆ ನಡೆದಿದೆ.

ಜೊತೆಗೆ ಖರೀದಿಸಿದ ತೊಗರಿ ತುಂಬಲು ಖಾಲಿ ಚೀಲಗಳಿರಲಿಲ್ಲ. ಇದನ್ನು ಗಮನಿಸಿದ  ತಹಶೀಲ್ದಾರ್ ಎಂ.ಎಸ್. ಬಾಗವಾನ ಅವರು ಢವಳಗಿ ಹಾಗೂ ನಾಲತವಾಡದ ಖರೀದಿ ಕೇಂದ್ರಗಳಿಂದ ಖಾಲಿಚೀಲಗಳನ್ನು ತರಿಸುವಂತೆ ಸೂಚಿಸಿ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಂಡರು.

ತೊಗರಿ ಖರೀದಿ ಕೇಂದ್ರದಲ್ಲಿ ಫೆಡರೇಶನ್ ನಿಂದ ಬರಬೇಕಿದ್ದ ಗೋಣಿ ಚೀಲಗಳು ಬರದೇ ಸಮಸ್ಯೆಯಾಗಿತ್ತು. ಸಮೀಪದ ಢವಳಗಿ ಖರೀದಿ ಕೇಂದ್ರಕ್ಕೆ ಫೋನ್ ಮೂಲಕ ಚೀಲ ಕಳಿಸುವಂತೆ ಕೇಳಿದರಾದರೂ ತಮ್ಮ ಬಳಿ ಅವಶ್ಯಕತೆ ಇರುವಷ್ಟು ಮಾತ್ರ ಚೀಲಗಳು ಇವೆ ಎಂದು ಅಲ್ಲಿಯ ಸಿಬ್ಬಂದಿ ತಿಳಿಸಿದ್ದಾರೆ. ನಂತರ ನಾಲತವಾಡ ಖರೀದಿ ಕೇಂದ್ರದ ಮೂಲಕ ಖಾಲಿ ಚೀಲ ತರಿಸಿ ಖರೀದಿ ಪ್ರಕ್ರಿಯೆ ಮುಂದುವರೆಸಲಾಯಿತು. ನಿನ್ನೆ ಮಳೆ ಶುರುವಾಗುತ್ತಿದ್ದಂತೆಯೇ ಖರೀದಿ ಕೇಂದ್ರದಲ್ಲಿ ತೊಗರಿ ಶೇಖರಿಸಿ ಇಟ್ಟಿದ್ದ ತೊಗರಿ ದಾಸ್ತಾನಿಗೆ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News