ಕ್ರಶರ್‌ಗೆ ಸಿಲುಕಿ ಕಾರ್ಮಿಕ ಮಹಿಳೆ ಮೃತ್ಯು
Update: 2017-03-16 22:57 IST
ತರೀಕೆರೆ, ಮಾ.16: ಪಟ್ಟಣದ ಸಮೀಪದಲ್ಲಿನ ಬೇಲೆನಹಳ್ಳಿ ಗ್ರಾಮದ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕ್ರಶರ್‌ಗೆ ಸಿಲುಕಿ ಕಾರ್ಮಿಕ ಮಹಿಳೆಯೊಬ್ಬರು ಮೃತ ಪಟ್ಟಿರುವ ಘಟನೆ ಗುರುವಾರ ನಡೆದಿದೆ.
ಮೃತಪಟ್ಟವರನ್ನು ಗಂಟೆಕಣಿವೆ ನಿವಾಸಿ ಶಾಂತಮ್ಮ (33)ಎಂದು ಗುರುತಿಸಲಾಗಿದೆ. ಶಾಂತಮ್ಮ ಅವರು ಎಂದಿನಂತೆ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಕ್ರಶರ್ ಮೆಷಿನ್‌ನ ಬೆಲ್ಟ್‌ಗೆ ಅವರ ಸೀರೆ ಸಿಲುಕಿ ಗಂಭೀರ ಗಾಯಗೊಂಡು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಕ್ರಶರ್ ಮಾಲಕನ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದ್ದು, ಕ್ರಷರ್ ಮಾಲಕ ಶ್ರೀನಿವಾಸ್ ಎಂಬವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.