×
Ad

ಬಿಜೆಪಿ ಪುರಸಭೆ ಸದಸ್ಯ ಶ್ರೀನಿವಾಸ್ ಪ್ರಸಾದ್ ಕೊಲೆ ಪ್ರಕರಣ: ಇನ್ನೊಬ್ಬ ಆರೋಪಿ ಸೆರೆ

Update: 2017-03-17 18:11 IST

ಆನೇಕಲ್, ಮಾ.17: ಬೊಮ್ಮಸಂದ್ರ ಪುರಸಭೆಯ ಬಿಜೆಪಿ ಶಾಸಕ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ವಾಸು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ಬಂಧಿಸಲಾಗಿದೆ.

ಆರನೇ ಆರೋಪಿ ಸತೀಶ್ ಎಂಬವರನ್ನು ಬಂಧಸಲಾಗಿದೆ ಎಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬೋವಿಕಟ್ಟಿ  ಗ್ರಾಮದಲ್ಲಿ ಬಧಿಸಲಾಗಿದೆ.

ಹೊಸಕೋಟೆ ಪಿಎಸ್ಐ ರಂಗಸ್ವಾಮಿ ತಂಡ ಆರೋಪಿಯನ್ನು ಬಂಧಿಸಿಮಾಡಿ ಬೆಂಗಳೂರಿಗೆ ಕರೆದ್ಯೂಯುತ್ತಿರುವುದಾಗಿ ತಿಳಿದುಬಂದಿದೆ. 

ಮಾರ್ಚ್ 14 ರಂದು ಶ್ರೀನಿವಾಸ್ ಪ್ರಸಾದ್ ಕೊಲೆ  ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿ ಬನಹಳ್ಳಿ ಮಂಜು ಪತ್ತೆಗೆ ಶೋಧ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ 5 ಜನರನ್ನ ಅರೆಸ್ಟ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News