×
Ad

​ಜಿಂಕೆ ಬೇಟೆ: ಇಬ್ಬರ ಬಂಧನ

Update: 2017-03-17 19:56 IST

ಮೂಡಿಗೆರೆ, ಮಾ.17: ತಾಲೂಕಿನ ನಂದೀಪುರ ಗ್ರಾಪಂ ವ್ಯಾಪ್ತಿಯ ಬೇವಿನಗುಡ್ಡ ಗ್ರಾಮದಲ್ಲಿ ಜಿಂಕೆಯನ್ನು ಭೇಟೆಯಾಡಿದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ಬಂಧಿತರಾದ ರಾಜು (42) ಮತ್ತು ಸೋಮಶೇಖರ್ (42) ರಸ್ತೆ ಪಕ್ಕದಲ್ಲಿ ಉರುಳುವೊಡ್ಡಿ ಜಿಂಕೆಯನ್ನು ಹಿಡಿದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಎಫ್ ಮುದ್ದಣ್ಣ, ಆರ್‌ಎಫ್‌ಒ ಪ್ರಹ್ಲಾದ್ ಇವರ ಮಾರ್ಗದರ್ಶನದಲ್ಲಿ ಉಪ ವಲಯ ಅಧಿಕಾರಿಗಳಾದ ಆರ್.ರಮೇಶ್ ಮತ್ತು ಎಂ.ಎ.ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ 15 ಕೆ.ಜಿ. ಮಾಂಸ, ತಲೆ, ಕಾಲು, ಕೊಂಬು ಮತ್ತು ಚರ್ಮ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೋಹಿಜೀನ್, ವೆಂಕಟೇಶ್, ಮುಳ್ಳಯ್ಯ, ಮಂಜುನಾಥ್, ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News