ಸಾಯುವ ಸ್ಥಿತಿಯಲ್ಲಿ ಸಾರಕ್ಕಿ ಕೆರೆ..!

Update: 2017-03-17 18:30 GMT

ಮಾನ್ಯರೆ,

ಬೆಂಗಳೂರಿನ ಖ್ಯಾತ ‘ಸಾರಕ್ಕಿ ಕೆರೆ’ ಅವಸಾನದ ಅಂಚಿನಲ್ಲಿದೆ. ಈ ಕೆರೆ ಬಳಿ ಹೋಗುತ್ತಿದ್ದಂತೆ ತ್ಯಾಜ್ಯಗಳ ರಾಶಿ, ಸೊಳ್ಳೆಗಳು, ಕಟ್ಟಡಗಳ ಅವಶೇಷ, ಬಿಳಿ ನೊರೆಗಳು, ಗಬ್ಬು ನಾತ, ಕೊಳಚೆಗಳು ನಮ್ಮನ್ನು ಸ್ವಾಗತಿಸುತ್ತವೆ. ಈ ಬಾರಿ ಈ ಕೆರೆಯ ನೀರು ಕೂಡಾ ಬತ್ತಿ ಹೋಗಿದೆ. ಇದಕ್ಕೆ ಕಾರಣಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ.

ಸಾರಕ್ಕಿ ಕೆರೆ ದಯನೀಯ ಸ್ಥಿತಿಯಲ್ಲಿದ್ದರೂ ಪುನರುಜ್ಜೀವನಗೊಳಿಸುವ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಈ ಬಗ್ಗೆ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದವರನ್ನು ವಿಚಾರಿಸಿದರೆ ‘‘ಕೆರೆ ಅಭಿವೃದ್ಧಿಗೆ ಅನುದಾನ ಇಲ್ಲ’’ ಎಂಬ ‘ಸಿದ್ಧ ಉತ್ತರ’ ನೀಡುತ್ತಾರೆ. ಈ ಕೆರೆಯನ್ನು ಬಿಬಿಎಂಪಿ ಮೂಲಕ ಅಭಿವೃದ್ಧಿ ಪಡಿಸಲು ವಿಸ್ತೃತ ಯೋಜನಾ ವರದಿಯೊಂದನ್ನು ಅಧಿಕಾರಿಗಳು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ಅದಕ್ಕೆ ಕೆಲವು ತಿದ್ದುಪಡಿ ಸೂಚಿಸಿ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದವರು ಬಿಬಿಎಂಪಿಗೆ ವಾಪಸ್ ಕಳುಹಿಸಿದ್ದರು. ಆದರೆ ಬಿಬಿಎಂಪಿ ಇನ್ನೂ ಪರಿಷ್ಕೃತ ವರದಿಯನ್ನು ತಯಾರಿಸಿಲ್ಲ.

ಕೆರೆಗೆ ಪ್ರತೀದಿನ ಲಕ್ಷಾಂತರ ಲೀಟರ್ ಕೊಳಚೆ ನೀರು ಸೇರಿ, ನೀರು ವಿಷವಾಗುತ್ತಿದೆ. ಅರಣ್ಯ ಇಲಾಖೆಯ ಸ್ವಾಧೀನದಲ್ಲಿದ್ದಾಗ ಚೆನ್ನಾಗಿದ್ದ ಈ ಕೆರೆ, ಈಗ ಕೊಳಚೆಯಾಗಿದೆ. ಕೂಡಲೇ ಈ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿ ಉಳಿಸಬೇಕಾಗಿದೆ. ಇಲ್ಲದಿದ್ದರೆ ಕೆರೆ ಅವಸಾನ ತಲುಪುವುದು ಖಂಡಿತ.

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News