ಶವಸಂಸ್ಕಾರಕ್ಕೆ ಹೊರಟವರು ತಲುಪಿದ್ದು ಆಸ್ಪತ್ರೆಗೆ...
Update: 2017-03-18 19:10 IST
ತುಮಕೂರು.ಮಾ.18: ಟೆಂಪೋ ಚಕ್ರವೊಂದು ಒಡೆದ ಪರಿಣಾಮ ವಾಹನ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದು 12 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 04ರ ಹಿರೇಹಳ್ಳಿ ಬಳಿ ನಡೆದಿದೆ.
ಶವಸಂಸ್ಕಾರವೊಂದರಲ್ಲಿ ಪಾಲ್ಗೊಳ್ಳಲು ಟೆಂಪೋ ಟ್ರಾವಲ್‌ನಲ್ಲಿ ಬೆಂಗಳೂರಿನಿಂದ ಬಿರೂರಿಗೆ ಹೋಗಿದ್ದ ಬೆಂಗಳೂರಿನ ಕುಟುಂಬವೊಂದು, ಬೆಂಗಳೂರಿಗೆ ವಾಪಸ್ಸಾಗುವಾಗ ಹಿರೇಹಳ್ಳಿ ಸಮೀಪ ವಾಹನದ ಟೈರ್ ಒಡೆದು ವಾಹನ ರಸ್ತೆಯಲ್ಲಿಯೇ ಪಲ್ಟಿಯಾಗಿದೆ.
ವಾಹನದಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆಂದು ತುಮಕೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.