×
Ad

ಯೋಗೇಶ್ ಮಾಸ್ಟರ್‌ಗೆ ಮಸಿ ಬಳಿದ ಪ್ರಕರಣ : 7 ಆರೋಪಿಗಳ ಮೇಲೆ ರೌಡಿ ಶೀಟ್: ಎಸ್ಪಿ ಭೀಮಾಶಂಕರ್

Update: 2017-03-18 23:09 IST

ದಾವಣಗೆರೆ, ಮಾ.18: ಸಾಹಿತಿ ಯೋಗೇಶ್ ಮಾಸ್ಟರ್ ಮೇಲೆ ಮಸಿ ಬಳಿದ ಪ್ರಕರಣದ ಎಲ್ಲ ಆರೋಪಿಗಳ ವಿರುದ್ದ ರೌಡಿಶೀಟ್ ತೆರೆಯಲಾಗಿದೆ ಎಂದು ಎಸ್ಪಿಡಾ. ಭೀಮಾಶಂಕರ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ದಿನ ಚೇತನ ಮತ್ತು ಶಿವಪ್ರಸಾದ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಮರುದಿನ ಶರಣಾದ ಐವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇವರೆಲ್ಲರಿಗೂ ಜಾಮೀನು ದೊರೆತಿದೆ.
 ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲರ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ. ಮುಂದೆ ಈ ರೀತಿ ಕೃತ್ಯಗಳಲ್ಲಿ ಆರೋಪಿಗಳು ಭಾಗಿಯಾದಲ್ಲಿ ಗಡಿಪಾರು ಮಾಡಲು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.
ಕೊಲೆ ಪ್ರಕರಣ ತನಿಖೆಗೆ 2 ತಂಡ ರಚನೆ: ಇತ್ತೀಚೆಗೆ ಬನಶಂಕರಿ ಬಡಾವಣೆಯಲ್ಲಿ ಹಾಲೇಶ ಎನ್ನುವ ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿಗಳ ಪತ್ತೆಗೆ ಡಿವೈಎಸ್ಪಿನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿದೆ. ಶೀಘ್ರದಲ್ಲೇ ಆ

ರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News