ಅಶ್ಲೀಲ ಚಿತ್ರ ತೋರಿಸಿದ ಶಿಕ್ಷಕ ನಾಪತ್ತೆ
Update: 2017-03-18 23:13 IST
ಹೊನ್ನಾವರ, ಮಾ.18: ಶಾಲಾ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿ ಆಕ್ಷೇಪಕ್ಕೊಳಗಾಗಿದ್ದ ತಾಲೂಕಿನ ಮಂಕಿಯ ನಾಕುದಾ ಮೊಹಲ್ಲಾದ ಸರಕಾರಿ ಶಾಲೆಯ ಶಿಕ್ಷಕ ರೆರಾನ್ ಗೊನ್ಸಾಲೀಸ್ ವಿರುದ್ಧ ಪೊಕ್ಸೊ ಕಾಯ್ದೆಯಡಿಯಲ್ಲಿ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳಲ್ಲಿ ಹಿಂದೆ ಶಿಕ್ಷಕ ಅಶ್ಲೀಲ ಚಿತ್ರ ತೋರಿಸಿದ ಧೋರಣೆಯಿಂದ ಆಕ್ರೋಶಗೊಂಡಿದ್ದ ಪಾಲಕರು ಹಾಗೂ ಸಾರ್ವಜನಿಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಕ್ಷಕ ರೆರಾನ್ ಗೊನ್ಸಾಲೀಸ್ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.