×
Ad

ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ: 20 ಮಂದಿಗೆ ಗಾಯ

Update: 2017-03-19 20:13 IST

ಮಂಡ್ಯ, ಮಾ.19: ತಾಲೂಕಿನ ತಿಮ್ಮನಹೊಸೂರು ಗೇಟ್ ಬಳಿ ರವಿವಾರ ಬೆಳಗ್ಗೆ ಟಾಟಾ ಏಸ್ ವಾಹನ ಪಲ್ಟಿಯಾಗಿ ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

ತಾಲೂಕಿನ ಕಟ್ಟೆದೊಡ್ಡಿ ಗ್ರಾಮದ ರುಕ್ಮಿಣಿ, ನೇತ್ರವಾತಿ, ಚನ್ನೇಗೌಡ, ಲಕ್ಷ್ಮಮ್ಮ, ಚನ್ನಮ್ಮ, ಸುಧಾ, ಮಂಗಳಮ್ಮ, ಸವಿತಾ, ಲತಾ, ಕೆಂಪಮ್ಮ, ಪದ್ಮಮ್ಮ, ಕೆ.ಎನ್.ಸುಮಾ, ಮಹೇಂದ್ರಮ್ಮ, ಸಣ್ಣಮ್ಮ, ಶಿವಮ್ಮ, ಸರಸಮ್ಮ, ಗೌರಮ್ಮ, ಪುಟ್ಟಸ್ವಾಮಿ, ಇತರರು ಗಾಯಗೊಂಡವರು.

ತಿಮ್ಮನಹೊಸೂರು ಗ್ರಾಮದಲ್ಲಿ ನಡೆಯುತ್ತಿದ್ದ ತಿಥಿ ಕಾರ್ಯಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದ್ದು, ಎಲ್ಲರೂ ಪ್ರಾಣಾಯಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News