ಮದ್ರಸ ಅಧ್ಯಾಪಕನ ಹತ್ಯೆ; ಕರ್ನಾಟಕ ಎಸ್ಸೆಸ್ಸೆಫ್ ಖಂಡನೆ

Update: 2017-03-21 07:07 GMT

ಮಡಿಕೇರಿ,ಮಾ.21: ಕಾಸರಗೋಡು ಚೂರಿ ಎಂಬಲ್ಲಿ ನಡೆದ ಕೊಟ್ಟಮುಡಿ ಆಝಾದ್ ನಗರ ನಿವಾಸಿ ರಿಯಾಝ್ ಮುಸ್ಲಿಯಾರವರ ಭೀಕರ ಹತ್ಯೆಯನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಂಡಂಗೇರಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಭೀಕರ ಕೊಲೆಯ ಹಿಂದಿರುವ ದುಷ್ಟಶಕ್ತಿಗಳನ್ನು ಕಾನೂನಿನಡಿಯಲ್ಲಿ ತಕ್ಷಣ ಬಂಧಿಸಿ, ಅಪರಾಧಿಗಳಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು. ಅಲ್ಲದೆ ಅಲ್ಪಸಂಖ್ಯಾತರ ಸಮುದಾಯ ಹಾಗೂ ಆರಾಧನಾಲಯಗಳಿಗೆ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News