ನಂಬಿಕೆ ಮತ್ತು ಪರಿಶ್ರಮ ಎರಡು ಇದ್ದಲ್ಲಿ ಯಶಸ್ಸು ಸಾದ್ಯ : ಉಮಾಮಹೇಶ್

Update: 2017-03-21 11:47 GMT

ಚಿಕ್ಕಮಗಳೂರು, ಮಾ.21: ಶಾಲಾ ಮಕ್ಕಳು ಯಶಸ್ಸು ಸಾಧಿಸುವವರು ಯಾರೇ ಆಗಲೀ ನಂಬಿಕೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಾಧ್ಯ ಎಂದು ಶಿಕ್ಷಕ ಸಂಘದ ಅಧ್ಯಕ್ಷ ಉಮಾಮಹೇಶ್ ಹೇಳಿದ್ದರು.

ಅವರು ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಬಿಜಿಎಸ್ ಶಾಲೆಯ ಹತ್ತನೇ ತರಗತಿ ವಿಧ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ನಂಬಿಕೆಯೊಂದಿಗೆ ಶ್ರಮವು ಅತೀ ಮುಖ್ಯ. ಪರೀಕ್ಷೆಯಲ್ಲಿ ಪಾಸಾಗಲು ಕೇವಲ ದೇವಸ್ಥಾನ, ಮಂದಿರಗಳೀಗೆ ತೆರಳಿ ಬೇಡಿಕೊಂಡು ಬಂದರೆ ಸಾಲದು. ಮನೆಯಲ್ಲಿ ಕುಳಿತು ಅಭ್ಯಾಸ ಮಾಡಬೇಕು.

 ಶಿಕ್ಷಕರೊಂದಿಗೆ ಚರ್ಚಿಸಿ ವಿಷಯಗಳನ್ನು ತಿಳಿದುಕೊಳ್ಳಬೇಕು ಮನೆಯ ಪಾಠವನ್ನು ಚನ್ನಾಗಿ ಓದಿಕೊಳ್ಳಬೇಕು. ಯಾವುದೇ ಕೆಲಸ ಮಾಡಿದರು ಅ ಕೆಲಸದಲ್ಲಿ ನಂಬಿಕೆ ಇಡಬೇಕು. ನಂತರ ಅದಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡು ಪರಿಪೂರ್ಣವಾಗಿ ಕಾರ್ಯ ಮಾಡಿದ್ದಲ್ಲಿ ಯಶಸ್ಸು ಸಾದ್ಯ ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.

 ವಿಧ್ಯಾರ್ಥಿಗಳು ರಾತ್ರಿ ಮಲಗಿದ ಮೇಲೆ 10 ನಿಮಿಷ ಬೆಳಗಿನಿಂದ ರಾತ್ರಿವರೆಗೆ ಮಾಡಿದ ಎಲ್ಲಾ ಕೆಲಸಗಳ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು. ಇಂದು ಮಾಡಬೇಕಿದ್ದ ಕೆಲಸವೇನಾದರು ಬಾಕಿ ಉಳಿದಿದರೇ ಮರುದಿನವೇ ಮಾಡಿ ಮುಗಿಸಬೇಕೆಂಬ ಧ್ಯೇಯ ಇಟ್ಟುಕೊಂಡು ಮಲಗಬೇಕು. ಸಮಯಕ್ಕೆ ನಾವು ಹೊಂದಿಕೊಳ್ಳಬೇಕು ಏಕೆಂದರೇ ಕಳೆದುಹೋದ ಸಮಯ ಮತ್ತೆ ಸಿಗದು ಆದರಿಂದ ಪ್ರತಿದಿನ ಬೆಳಗ್ಗೆ ಬೇಗ ಎದ್ದು ಯಾವ ಕೆಲಸ ಮಾಡಬೇಕು. ಅವುಗಳನ್ನು ಮಾಡಿ ಮುಗಿಸಬೇಕು. ಏನು ಅಭ್ಯಾಸ ಮಾಡಬೇಕು ಎಂದರು.

 ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ವಿದ್ಯಾ ದೇವತೆ ಸರಸ್ವತಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಓದಿದ ದಿನಗಳನ್ನು ಕ್ಷಣಗಳನ್ನು ವಿಧ್ಯಾರ್ಥಿಗಳು ವೇದಿಕೆಯಲ್ಲಿ ಹಂಚಿಕೊಂಡರು.

 ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಜೆ.ಸುರೇಂದ್ರ, ಬಿಜಿಎಸ್ ಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ್, ಶಿಕ್ಷಕ ಎಸ್.ಆರ್.ವೈದ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News