ಅಕ್ರಮ ಮದ್ಯ ವಶ

Update: 2017-03-21 17:36 GMT

 ಕಾರವಾರ ಮಾ.21: ತಾಲೂಕಿನ ಶಿರವಾಡದ ರೈಲು ನಿಲ್ದಾಣದಲ್ಲಿ ಮಡಗಾಂವ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಡೆಮೊ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಕೊಂಡಘಟನೆ ಮಂಗಳವಾರ ಕಾರವಾರದಲ್ಲಿ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಮಡ ಗಾಂವ್ ನಿಂದ ಮಂಗಳೂರಿಗೆ ಬರುತ್ತಿರುವ ಡೆಮೊ ರೈಲಿನಲ್ಲಿ ಅಕ್ರಮ ಮದ್ಯಸಾಗಾಟದ ಖಚಿತ ಮಾಹಿತಿ ಅರಿತ ರೈಲ್ವೆ ಪೊಲಿಸರು ತಪಾಸಣೆ ನಡೆಸಿದಾಗ ವಾರಸುದಾರರಿಲ್ಲದ ವಿವಿಧ ಬ್ರಾಂಡ್ ಹಾಗೂ ವಿವಿಧ ಗಾತ್ರದ ಸುಮಾರು 13 ಸಾವಿರ ರೂ. ವೌಲ್ಯದ 54 ಲೀಟರ್ ತೂಕದ 266 ಬಾಟಲಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳನ್ನು ಕಾರವಾರದ ಅಬಕಾರಿ ಇಲಾಖೆಗೆ ಹಸ್ತಾಂತರಿಸಿರುವ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News