‘ಕರಡಿ ಸಫಾರಿ’ಯಿಂದ ತಪ್ಪಿಸಿಕೊಂಡ ಕರಡಿ ಇಟ್ಟಿಗೆ ಕಾರ್ಖಾನೆಯಲ್ಲಿ ಪ್ರತ್ಯಕ್ಷ!

Update: 2017-03-22 07:08 GMT
ಸಾಂಧರ್ಬಿಕ ಚಿತ್ರ 

ಆನೇಕಲ್, ಮಾ.22: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಸಫಾರಿಯಿಂದ ತಪ್ಪಿಸಿಕೊಂಡಿದ್ದ ಕರಡಿಯೊಂದು ಪಕ್ಕದ ಗ್ರಾಮದಲ್ಲಿ ಪ್ರತ್ಯಕ್ಷಗೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕರಡಿಯು ಆನೇಕಲ್ ತಾಲೂಕಿನ ಬಗ್ಗನದೊಡ್ಡಿ ಸಮೀಪದ ಇಟ್ಟಿಗೆ ಕಾರ್ಖಾನೆಯಲ್ಲಿ ಇಂದು ಪ್ರತ್ಯಕ್ಷಗೊಂಡಿದೆ. ಬಗ್ಗನದೊಡ್ಡಿ ಗ್ರಾಮವು ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಿದೆ. ಕರಡಿಯನ್ನು ಗಮನಿಸಿದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
 ಕಳೆದ ಮೂರು ದಿನಗಳ ಹಿಂದೆ ಬನ್ನೇರುಘಟ್ಟ ಕರಡಿ ಸಫಾರಿಯಿಂದ ಹೆಣ್ಣು ಕರಡಿಯೊಂದು ತಪ್ಪಿಸಿಕೊಂಡಿತ್ತು. ಇದೀಗ ಕರಡಿ ಪ್ರತ್ಯಕ್ಷಗೊಂಡಿರುವ ಸುದ್ದಿ ತಿಳಿದು ಅದರ ಸೆರೆಗೆ ಪಾಕ್ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಈ ಕರಡಿ ಸಫಾರಿಯನ್ನು ಎಸ್.ಓ.ಎಸ್ ಎಂಬ ಎನ್.ಜಿ.ಓ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News