ಪಿಯುಸಿ ವಿದ್ಯಾರ್ಥಿಗಳಿಗೆ ದಡಾರ ಲಸಿಕೆ ವಿಸ್ತರಣೆಗೆ ಸರಕಾರಕ್ಕೆ ಪತ್ರ: ಜಿಲ್ಲಾಧಿಕಾರಿ

Update: 2017-03-22 17:23 GMT

ಶಿವಮೊಗ್ಗ, ಮಾ.22: ದಡಾರ ಮತ್ತು ರುಬೆಲ್ಲಾ ಕಾಯಿಲೆಗಳು ಹರೆಯದ ಯುವಜನರಿಗೂ ಹರಡಬಹುದಾಗಿರುವುದರಿಂದ ಈ ಲಸಿಕೆಯನ್ನು ಪಿಯುಸಿ ಹಂತದ ಮಕ್ಕಳಿಗೂ ವಿಸ್ತರಿಸಲು ಸರಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ಎಂ.ಲೋಕೇಶ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಡಾರ ಮತ್ತು ರುಬೆಲ್ಲಾ, ಹರೆಯದ ಮಕ್ಕಳಿಗೂ ಹರಡಬಹುದಾದ ಕಾಯಿಲೆಯಾಗಿರುವುದರಿಂದ ಪಿಯುಸಿ ವಿದ್ಯಾರ್ಥಿಗಳಿಗೂ ಲಸಿಕೆ ವಿಸ್ತರಣೆ ಮಾಡುವುದು ಸೂಕ್ತವಾಗಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಿದರು.


್ರಸ್ತುತ ಫೆಬ್ರವರಿ 7ರಿಂದ ಮಾರ್ಚ್ 19ರವರೆಗೆ ನಡೆದ ಲಸಿಕೆ ಕಾರ್ಯ ಕ್ರಮದಲ್ಲಿ ಜಿಲ್ಲೆಯಲ್ಲಿ ಶೇ.99.9 ರಷ್ಟು ಯಶಸ್ವಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಸಭೆಗೆ ಮಾಹಿತಿ ನೀಡಿದರು.
ಕಳೆದ ವರ್ಷದ ಸಾಧನೆಯ 1,56,630 ಗುರಿಯನ್ನು ಸಾಧಿಸುವ ಸಂಬಂಧ ಬೇಕಿರುವ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಸಂಬಂಧಿಸಿದಂತೆ ಸ್ಥಳೀಯವಾಗಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರೋಗ್ಯಾಧಿಕಾರಿಗೆ ಸೂಚಿಸಿದರು.


ಈ ವೇಳೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಪ್ರಸ್ತುತ ಜಿಲ್ಲಾದ್ಯಂತ 867 ಲಸಿಕಾ ಕೇಂದ್ರಗಳು, 1,734 ತಂಡಗಳು ಇವೆ. 3,640 ವ್ಯಾಕ್ಸಿನೇಟರ್ಸ್‌, 183 ಮೇಲ್ವಿಚಾರಕರು, 41 ಟ್ರಾನ್ಸಿಸ್ಟ್ ತಂಡ, 29 ಸಂಚಾರಿ ತಂಡಗಳನ್ನು ನೇಮಿಸಲಾಗಿದೆ ಅಲ್ಲದೆ ಈ ಕಾರ್ಯಕ್ರಮದಲ್ಲಿ 600 ಆರೋಗ್ಯ ಸಿಬ್ಬಂದಿ, 2,402 ಅಂಗನವಾಡಿ ಕಾರ್ಯಕರ್ತೆಯರು, 1,141 ಆಶಾ ಕಾರ್ಯಕರ್ತೆಯರೂ ಸೇರಿ ಒಟ್ಟು 4, 143 ಮಂದಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.


ಎ.2ರಂದು ಪಲ್ಸ್‌ಪೋಲಿಯೊ
2016-17ನೆ ಸಾಲಿನಲ್ಲಿ ಎ.2ರಂದು ರವಿವಾರ ಪಲ್ಸ್‌ಪೋ ಲಿಯೊ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ಪೋಷಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಲೋಕೇಶ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News