​ವಿವಾಹಿತ ಯುವತಿ ನಾಪತ್ತೆ

Update: 2017-03-22 17:24 GMT

ಚಿಕ್ಕಮಗಳೂರು, ಮಾ.22: ನಗರದ ವಿವಾಹಿತ ಯುವತಿಯೋರ್ವಳು ಕಾಣೆಯಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
 ನಗರದ ಪೆನ್ಷನ್ ಮೊಹಲ್ಲಾದ 1ನೆ ತಿರುವು ನಿವಾಸಿ ಸಿಮ್ರಾನ್(20) ಎಂಬಾಕೆ ಕಾಣೆಯಾಗಿದ್ದಾರೆ. ಸಿಮ್ರಾನ್ ಅವರನ್ನು ಶಿವಮೊಗ್ಗದ ಶೇಕ್ ಇಮ್ತಿಯಾಝ್ ಎಂಬವರೊಂದಿಗೆ 2016ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಶೇಕ್ ಇಮ್ತಿಯಾಜ್ ಹೆಚ್ಚು ಸಾಲ ಮಾಡಿಕೊಂಡಿದ್ದು, ಸಾಲಗಾರರು ಕಾಟ ತಡೆಯಲಾರದೆ ಪತ್ನಿ ಸಿಮ್ರಾನ್ ಅವರನ್ನು ಸ್ವಲ್ಪ ದಿನದ ಮಟ್ಟಿಗೆ ತವರು ಮನೆಯಲ್ಲಿ ಬಿಟ್ಟು ಹೋಗಿದ್ದರು.

ಆದರೆ ಇತ್ತೀಚೆಗೆ ಸಿಮ್ರಾನ್ ತವರು ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಚಹರೆ ಈ ರೀತಿ ಇದೆ: ಗೋಧಿ ಮೈ ಬಣ್ಣ, 5.2 ಅಡಿ ಎತ್ತರ, ಕನ್ನಡ, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆ ಮಾತನಾಡು ವವರಾಗಿದ್ದು, ಮನೆಯಿಂದ ಹೊರಟಾಗ ಕಪ್ಪು ಗೆರೆ ಬೂದಿ ಬಣ್ಣದ ಟಾಪ್, ರೆಡ್ ಪ್ಯಾಂಟ್ ಚೂಡಿದಾರ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News