​ಕಸ್ತೂರಿ ರಂಗನ್ ವರದಿ ಬಿಎಸ್‌ವೈರಿಂದ ಜನಹಿತ ಕಡೆಗಣನೆ: ರಮೇಶ್ ಹೆಗಡೆ

Update: 2017-03-22 17:26 GMT

ಶಿವಮೊಗ್ಗ, ಮಾ.22: ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಜಾರಿ ಮಾಡದಂತೆ ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲಿಯೇ ಸೂಕ್ತ ನಿರ್ಣಯ ಅಂಗೀಕರಿಸಬೇಕು ಎಂದು ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜಕೀಯ ನಾಯಕರ ಮತ್ತು ವಿವಿಧ ಪಕ್ಷಗಳ ಹೇಳಿಕೆಯಿಂದ ಜನರ ಆತಂಕ ದೂರವಾಗಿಲ್ಲ. ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕ ಸಮಾರಂಭಗಳಲ್ಲಿ ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅಧಿವೇಶನದಲ್ಲಿ ಮತ್ತು ಪರಿಸರ ಸಚಿವರು ಕರೆದ ಸಭೆೆಯಲ್ಲಿ ಭಾಗಿಯಾಗದೇ ಜನರ ಹಿತವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.


2015ರ ಆ.3ರಂದು ಪಶ್ಚಿಮಘಟ್ಟ ಸಂಸದರ ಸಭೆಯನ್ನು ಪರಿಸರ ಸಚಿವರು ಕರೆದಾಗ ಶಿವಮೊಗ್ಗ ಸಂಸದ ಬಿಎಸ್‌ವೈ ಹಾಜರಾಗಲಿಲ್ಲ. ಬಿಎಸ್‌ವೈ ಆ ಸಭೆೆಯಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರೆ ಈ ಅಧಿಸೂಚನೆ ಪ್ರಕಟವಾಗುತ್ತಿರಲಿಲ್ಲ ಎಂದು ಹೇಳಿದರು.
 ಗೋಷ್ಠಿಯಲ್ಲಿ ಬೆಳೆಗಾರರ ಸಂಘದ ಪ್ರಮುಖ ಡಿ.ಸಿ.ನಿರಂಜನ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News