1300 ಸಂಚಾರಿ ಪೊಲೀಸರ ನೇಮಕ: ಡಾ.ಜಿ.ಪರಮೇಶ್ವರ್

Update: 2017-03-23 17:15 GMT

ಬೆಂಗಳೂರು, ಮಾ.23: ಸಂಚಾರ ವ್ಯವಸ್ಥೆಯ ಸುಗಮ ನಿರ್ವಹಣೆಗಾಗಿ 1300 ಸಂಚಾರಿ ಪೊಲೀಸರನ್ನು ಮುಂದಿನ ಎರಡು ತಿಂಗಳೊಳಗೆ ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯೆ ಡಾ.ಜಯಮಾಲಾರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ರಾಜ್ಯದಲ್ಲಿ 3400 ಸಂಚಾರಿ ಪೊಲೀಸರು ಕಾರ್ಯನಿರ್ವಸುತ್ತಿದ್ದಾರೆ. 5200 ಮಂದಿ ಮಂಜೂರಾತಿಯ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 1300 ಮಂದಿಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ನಗರದಲ್ಲಿಯೇ ಸುಮಾರು 65 ಲಕ್ಷ ನೋಂದಣಿಯಾಗಿರುವ ವಾಹನಗಳಿವೆ. ಪ್ರತಿದಿನ 1,250 ದ್ವಿಚಕ್ರ ಹಾಗೂ 428 ನಾಲ್ಕು ಚಕ್ರದ ವಾಹನಗಳು ನೋಂದಣಿಯಾಗುತ್ತಿದೆ. ಅಠಿಐ ಹೆಚ್ಚು ವಾಹನ ಸಂಖ್ಯೆಯನ್ನು ಹೊಂದಿರುವುದರಲ್ಲಿ ದೇಶದಲ್ಲೇ ಬೆಂಗಳೂರು ಎರಡನೆ ಸ್ಥಾನದಲ್ಲಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ 2003ರಲ್ಲಿ 19 ಲಕ್ಷ ವಾಹನಗಳಷ್ಟೇ ಇದ್ದವು. ಈಗ 66 ಲಕ್ಷ ವಾಹನಗಳಾಗಿವೆ. ಈಗಾಗಲೇ ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳು ಬೆಳೆದಿದ್ದು, ಶೇ.20ರಷ್ಟು ಮಾತ್ರ ಮೇಲ್ಸೇತುವೆ, ರಸ್ತೆ ಅಗಲೀಕರಣದಂತಹ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಹಾಗೂ ಪರ್ಯಾಯ ಮಾರ್ಗಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News