ಗೃಹ ಸಚಿವರಿಂದ ' ಭಾರತರತ್ನ ' ಪ್ರಶಸ್ತಿಗೆ ಶಿಫಾರಸು ಆದವರು ಯಾರು..? ಇಲ್ಲಿದೆ ನೋಡಿ...
ತುಮಕೂರು.ಮಾ.23:ಕರ್ನಾಟಕ ರತ್ನ, ಪದ್ಮಭೂಷಣ್ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಹಾಗೂ ಕೆಪಿಸಿಸಿ.ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದು ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಗೃಹ ಸಚಿವರು, ಕೆ.ಪಿ.ಸಿ.ಸಿ.ಅಧ್ಯಕ್ಷರೂ ಹಾಗೂ ಶ್ರೀಮಠದ ಪರಮ ಭಕ್ತರು ಆಗಿರುವ ಡಾ.ಜಿ.ಪರಮೇಶ್ವರ್, ಮುಂದಿನ ಏಪ್ರಿಲ್ 1 ಕ್ಕೆ ಸಿದ್ದಗಂಗಾ ಶ್ರೀಗಳಿಗೆ 110ವರ್ಷ ತುಂಬಲಿದೆ.ತ್ರಿವಿಧ ದಾಸೋಹದ ಮೂಲಕ ಸಾವಿರಾರು ಮಕ್ಕಳು ಬದುಕು ರೂಪಿಸಿಕೊಳ್ಳಲು ಕಾರಣೀಭೂತರಾಗಿರುವ ಸಿದ್ದಗಂಗಾ ಶ್ರೀಗಳು ಸಾಮಾಜಿಕವಾಗಿ,ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸಿದವರು.
ಶ್ರೀಮಠದಲ್ಲಿ ಲಕ್ಷಾಂತರ ಜನರು ದೇಶದ ವಿವಿದೆಡೆಗಳಲ್ಲಿ ನೆಲೆಸಿದ್ದಾರೆ. ಲಕ್ಷಾಂತರ ಜನರು ಬದುಕು ರೂಪಿಸಿಕೊಳ್ಳಲು ಕಾರಣೀಭೂತರಾದ ಇವರಿಗೆ ಭಾರತದ ಅತ್ಯುನ್ನತ ಗೌರವವಾದ ಭಾರತರತ್ನ ಪ್ರಶಸ್ತಿ ನೀಡಲು ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.