ವಿದ್ಯುತ್ ತಂತಿ ಸ್ಪರ್ಶ ಓರ್ವ ಸಾವು
Update: 2017-03-23 23:00 IST
ಸುಂಟಿಕೊಪ್ಪ, ಮಾ.23: ಕರಿಮೆಣಸು ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಅಲ್ಯುಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ಸ್ಪರ್ಶಿಸಿ, ಕೂಲಿಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ತಮಿಳುನಾಡು ಮೂಲದ ಸೇಲಂ ನಿವಾಸಿ ಪಳನಿ(45) ಎಂದು ಗುರುತಿಸಲಾಗಿದೆ. ಕೆದಕಲ್ ಸಮೀಪದ ಹಾಲೇರಿಯ ಬಿ.ಎಸ್. ಬಾಲಕೃಷ್ಣ ರೈ ಎಂಬವರ ತೋಟದಲ್ಲಿ ಪಳನಿ ಎಂಬಾತ ಮರವೇರಿ ಕರಿಮೆಣಸು ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ಅಲುಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ಬಿದ್ದಿದೆ.
ಪರಿಣಾಮ ಆತನಿಗೆ ವಿದ್ಯುತ್ ಸ್ಪರ್ಶಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಸುಂಟಿಕೊಪ್ಪಪೊಲೀಸ್ ಠಾಣೆಯ ಸಿಬ್ಬಂದಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ.