×
Ad

ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಲು ರೈತನಿಂದ ಐದು ಪೈಸೆ ಬಾಕಿ ಪಾವತಿಸಲು ಹೇಳಿದ ಎಸ್ ಬಿ ಐ !

Update: 2017-03-24 12:25 IST

ಮೈಸೂರು, ಮಾ.23: ರೈತನೊಬ್ಬನ ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚಲು ಆತನಿಗೆ ಐದು ಪೈಸೆ ಪಾವತಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೇಡಿಕೆಯಿರಿಸಿದ ಘಟನೆ ವರದಿಯಾಗಿದೆ.

ಎಸ್.ಸತೀಶ್ (35) ಎಂಬ ರೈತ ಬ್ಯಾಂಕಿನ ವಿಜಯನಗರ ಖಾತೆಯಿಂದ ಪಡೆದ ಎಸ್‌ಬಿಐ ಕ್ರೆಡಿಟ್ ಕಾರ್ಡನ್ನು ಕಳೆದ ಐದು ವರ್ಷಗಳಿಂದ ಉಪಯೋಗಿಸುತ್ತಿದ್ದರು. ಈ ಖಾತೆಯನ್ನು ಮುಚ್ಚಲು ಬ್ಯಾಂಕಿನ ಗ್ರಾಹಕ ಸೇವಾ ಅಧಿಕಾರಿಯನ್ನು ಸಂಪರ್ಕಿಸಿದಾಗ ಬಾಕಿ ಮೊತ್ತವನ್ನೆಲ್ಲಾ ಪಾವತಿಸಿ ಖಾತೆಯನ್ನು ಮುಚ್ಚಬೇಕೆಂದು ಅವರಿಗೆ ಹೇಳಲಾಗಿತ್ತು.

ನಿಯಮಿತವಾಗಿ ಹಣ ಪಾವತಿ ಮಾಡುತ್ತಿದ್ದ ರೈತ ಬಾಕಿ ಪಾವತಿಸಬೇಕೆಂದು ಅಧಿಕಾರಿ ಹೇಳಿದಾಗ ಆಶ್ಚರ್ಯಗೊಂಡಿದ್ದರು. ಇದು ಸೇವಾ ಶುಲ್ಕವಾಗಿರಬಹುದೆಂದು ಅಂದುಕೊಂಡರು. ಆದರೆ ಬ್ಯಾಂಕ್ ಅಧಿಕಾರಿ ಐದು ಪೈಸೆ ಬಾಕಿ ಪಾವತಿಸಬೇಕೆಂದು ಹೇಳಿದಾಗ ಆಶ್ಚರ್ಯ ಪಡುವ ಸರತಿ ರೈತನದ್ದಾಗಿತ್ತು. ಮೊದಲಿಗೆ ಬ್ಯಾಂಕ್ ಅಧಿಕಾರಿ ತಮಾಷೆ ಮಾಡುತ್ತಿರಬಹುದೆಂದುಕೊಂಡರೂ ನಂತರ ಅವರು ಗಂಭೀರವಾಗಿಯೇ ಹೇಳಿದ್ದರೆಂದು ರೈತನಿಗೆ ಅರಿವಾಗಿತ್ತು. ಬಾಕಿ ತೀರಿಸಲು ಹತ್ತು ರೂಪಾಯಿ ಪಾವತಿಸಲು ರೈತ ನಿರ್ಧರಿಸಿದರೂ ಅವರ ಗೆಳೆಯ 5 ಪೈಸೆಗೆ ಚೆಕ್ ಬರೆದುಕೊಡುವಂತೆ ಸಲಹೆ ನೀಡಿದರು. ಅಂತೆಯೇ ಚೆಕ್ ನೊಂದಿಗೆ ಸತೀಶ್ ಮಾರ್ಚ್ 18ರಂದು ಬ್ಯಾಂಕ್ ಖಾತೆಗೆ ಹೋದಾಗ ಅಲ್ಲಿನ ಸಿಬ್ಬಂದಿಗೆ ನಂಬಲಾಗಲಿಲ್ಲ. ಅಲ್ಲಿದ್ದವರೆಲ್ಲರೂ ಗೊಳ್ಳೆಂದು ನಕ್ಕು ಬಿಟ್ಟರು. ಹಾಗಿದ್ದರೂ ಚೆಕ್ ಸ್ವೀಕರಿಸಿದ ಬ್ಯಾಂಕ್ ರೈತನ ಕ್ರೆಡಿಟ್ ಕಾರ್ಡ್ ಖಾತೆಯನ್ನು ಬಂದ್ ಮಾಡಿತು. ಆದರೆ ಇದಕ್ಕಾಗಿ ಅವರು ಮತ್ತೆ ರೂ.3 ಪ್ರೊಸೆಸಿಂಗ್ ಫೀ ನೀಡಬೇಕಾಯಿತು.
ಅಂ

ತೂ ಈ ಘಟನೆಯಿಂದ ಈ ಹಿಂದೆ ಗೆಳೆಯರಿಂದ ಗುಂಡ್ಲುಪೇಟೆ ಸತೀಶ ಎಂದು ಕರೆಯಲ್ಪಡುತ್ತಿದ್ದ ರೈತ 'ಐದು ಪೈಸೆ ಸತೀಶ' ಎಂದು ಕರೆಸಿಕೊಳ್ಳುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News