ವಾಹನ ಢಿಕ್ಕಿ: ರೈತ ಸಂಘದ ಮುಖಂಡ ನಾಗಲಿಂಗಪ್ಪ ಮೃತ್ಯು
Update: 2017-03-24 23:05 IST
ಚಿತ್ರದುರ್ಗ, ಮಾ.24: ಮದಕರಿಪುರ ಸಮೀಪ ನಿನ್ನೆ ರಾತ್ರಿ ಮೋಟಾರ್ ಬೈಕ್‌ಗೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಿಂಗಪ್ಪ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.
ಬೈಕ್‌ನಲ್ಲಿ ಹಂಪಯ್ಯನಮಾಳಿಗೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ವಾಹನ ಗುದ್ದಿದಾಗ ನಿಯಂತ್ರಣ ಕಳೆದುಕೊಂಡ ಬೈಕ್ ಚಾಲಕ ನಾಗಲಿಂಗಪ್ಪಬೈಕ್ ಕಂಬಕ್ಕೆ ಹೊಡೆದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.