×
Ad

​ಮದುವೆಗೆ ನಿರಾಕರಣೆ : ಪ್ರಿಯತಮೆಯ ಕೊಲೆ ಯತ್ನ

Update: 2017-03-25 13:38 IST

ಕುಷ್ಟಗಿ, ಮಾ.25:ಮದುವೆಗೆ ನಿರಾಕರಿಸಿದ ಆರೋಪದಲ್ಲಿ ಯುವಕನೊಬ್ಬ ಪ್ರಿಯತಮೆ ಮತ್ತು ಅಕೆಯ ತಾಯಿಯನ್ನು ಚೂರಿಯಿಂದ ಇರಿದು, ಕೊಲೆಗೆ ಯತ್ನ ನಡೆಸಿದ ಘಟನೆ ಕುಷ್ಠಗಿಯಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ ಸಾಲುಂಚಿಮರ ನಿವಾಸಿ ಅಮರೇಗೌಡ ಈ ಕೃತ್ಯ ನಡೆಸಿದ ಆರೋಪಿ. ಆರೋಪಿಯಿಂದ ಹಲ್ಲೆಗೊಳಗಾದ ಶಹನಾ ಬೇಗಂ ಹಾಗೂ ಆಕೆಯ ತಾಯಿ ಕಮಲಾಬಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಹನಾ ಬೇಗಂ ಅವರಿಗೆ ಬೇರೆ ಹುಡುಗನೆ ಜೊತೆ ವಿವಾಹ ನಿಶ್ಚಯವಾಗಿತ್ತು. ಇದರಿಂದ ಕೋಪಗೊಂಡ ಅಮರೇಗೌಡ ನಿನ್ನೆ ರಾತ್ರಿ ಶಹನಾಬೇಗಂ ಮನೆಗೆ ಬಂದು ಗಲಾಟೆ ಮಾಡಿದ್ದಾನೆ
ಶಹನಾಬೇಗಂ ಮತ್ತು ಆಕೆಯ ತಾಯಿ ಕಮಲಾಬಿ ಅವರನ್ನು ಬಳಿಕ ಬೈಕ್‌ನಲ್ಲಿ ಕರೆದೊಯ್ದು ದಾರಿ ಮಧ್ಯೆ ಚಾಕುವಿನಿಂದ ಕೊಲೆಗೆ ಯತ್ನ ನಡೆಸಿದ್ದಾನೆ. ಹಲ್ಲೆಗೊಳಗಾದ ಶಹನಾಬೇಗಂ ಮತ್ತು ಆಕೆಯ ತಾಯಿ ಕಮಲಾಬಿ ಅವರ ಮೇಲೆ ಪೆಟ್ರೋಲ್‌ ಸುರಿದು ಕೊಲೆಗೆ ಯತ್ನ ನಡೆಸಿದ್ದಾನೆ. ಆದರೆ ತಾಯಿ ಮಗಳ ನರಳಾಟವನ್ನು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಹನಾಬೇಗಂ ಮತ್ತು ಆಕೆಯ ತಾಯಿ ಕಮಲಾಬಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.ಆರೋಪಿ ಅಮರೇಗೌಡ ತಲೆಮರೆಸಿಕೊಂಡಿದ್ದಾನೆ.                                                                                                                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News