ದಾಹದಿಂದ ಬಳಲಿದ ಹುಲಿಗೆ ಕೊನೆಗೂ ಸಿಕ್ಕಿತು ನೀರು!
ಚಿಕ್ಕಮಗಳೂರು, ಮಾ.25: ಭೀಕರ ಬರಗಾಲದಿಂದ ಅರಣ್ಯ ಪ್ರದೇಶದಲ್ಲೂ ನೀರಿನ ಕೊರತೆ ಎದುರಾಗಿದ್ದು ಕಾಡು ಪ್ರಾಣಿಗಳು ನೀರಿಗಾಗಿ ಪರಿತಪ್ಪಿಸುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಭದ್ರಾ ಹುಲಿ ಅಭಯಾರಣ್ಯದ ಹುಲಿಯೊಂದು ನೀರಿಗಾಗಿ ಓಡಾಡಿ ಸುಸ್ತಾಗಿತ್ತು. ಆ ಹುಲಿರಾಯನಿಗೆ ಕೊನೆಗೂ ನೀರು ಕುಡಿಯಲು ಸಿಕ್ಕಿದ್ದು ಹುಲಿ ನಿಟ್ಟಿಸಿರು ಬಿಟ್ಟಿದೆ. ಭದ್ರಾ ವನ್ಯಜೀವಿ ವಿಭಾಗದಲ್ಲಿ ಈಗಾಗಲೇ ಅಲ್ಲಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕಾಡಿನಿಂದ ನಾಡಿನತ್ತ ಕಾಡುಪ್ರಾಣಿಗಳು ಮುಖಮಾಡುತ್ತಿರುವ ಆರೋಫಗಳು ಕಾಡಂಚಿನ ವಾಸಿಗಳಿಮದ ಕೇಳಿ ಬರುತ್ತಿವೆ.
ಕಳೆದ ತಿಂಗಳು ನೀರಿಗಾಗಿ ಕಾಡಿನಿಂದ ನಾಡಿಗೆ ಬಂದು ಕಡವೆವೊಂದು ನಾಯಿಗಳ ದಾಳಿಗೆ ತುತ್ತಾಗಿ ಸಾವನಪ್ಪಿತ್ತು. ಸದ್ಯ ತಣಿಗೆಬೈಲ್ ಅರಣ್ಯ ಪ್ರದೇಶದಲ್ಲಿ ನೀರಿನ ಕೊರತೆ ಎದುರಾಗಿದೆ. ಹುಲಿ ಕೂಡ ನೀರು ಹುಡುಗಿಕೊಂಡು ಬಂದು ನೀರು ಕುಡಿಯುತ್ತಿರುವ ದೃಶ್ಯ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಲ್ಲಿ ಇಟ್ಟಿರುವ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.