ಸಿಸಿ ಕ್ಯಾಮರಾದಲ್ಲಿ ದಾಖಲಾದ ಈ ಮಹಿಳೆಯರು ಮಾಡಿದ್ದಾದರೂ ಏನು..?
Update: 2017-03-25 23:49 IST
ಮಂಡ್ಯ, ಮಾ.25: ಗ್ರಾಹಕರ ಸೋಗಿನಲ್ಲಿ ಬಂದ ನಾಲ್ವರು ಮಹಿಳೆಯರು ಅಂಗಡಿಯವರನ್ನು ಯಾಮಾರಿಸಿ ಸುಮಾರು ಒಂದು ಲಕ್ಷ ರೂ. ಮೌಲ್ಯದ ಸೀರೆಗಳನ್ನು ಕಳವು ಮಾಡಿರುವ ಘಟನೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಂಗೋಲಿ ಸಿಲ್ಕ್ಸ್ ಹೆಸರಿನ ಸೀರೆ ಅಂಗಡಿಗೆ ಶುಕ್ರವಾರ ಮಧ್ಯಾಹ್ನ ಸೀರೆ ಖರೀದಿಸಲು ಆಗಮಿಸಿದ ನಾಲ್ವರು ಮಹಿಳೆಯರು, ಸೀರೆಗಳನ್ನು ಅಪಹರಿಸಿರುವುದು ಅಂಗಡಿಯ ಸಿಸಿ ಟಿವಿಯಲ್ಲಿ ದಾಖಲಾಗುವ ಮೂಲಕ ಬೆಳಕಿಗೆ ಬಂದಿದೆ.
ಮಾರನೆ ದಿನ (ಶನಿವಾರ) ಸೀರೆ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅಂಗಡಿ ಮಾಲಕ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ನಾಲ್ವರು ಹೆಂಗಸರು ತಮ್ಮ ಕೈಚಳಕದಿಂದ ಸೀರೆಗಳನ್ನು ಕಳವು ಮಾಡಿ ಕಾರುಹತ್ತಿ ಪರಾರಿಯಾಗಿರುವುದು ದಾಖಲಾಗಿದ್ದು, ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.