" ಗಂಡ ನಿಧನವಾದ 3ನೆ ದಿನಕ್ಕೇ ಗೂಟದ ಕಾರಿನ ನೆನಪಾಗಿದೆ "
Update: 2017-03-26 20:06 IST
ಗುಂಡ್ಲುಪೇಟೆ, ಮಾ.26: ಗಂಡ ಸಚಿವನಾಗಿದ್ದಾಗ, ಅಧಿಕಾರದಲ್ಲಿದ್ದಾಗ ಹೆಂಡತಿಯಾದವಳು ಎಲ್ಲಾ ಸೌಲಭ್ಯಗಳನ್ನು ಅನುಭವಿಸಿರುತ್ತಾರೆ. ಅದರಂತೆ ಗೀತಾ ಮಹದೇವ ಪ್ರಸಾದ್ ಸಹ ಅನುಭವಿಸಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್‌ಸಿಂಹ ಹೇಳಿಕೆಯೊಂದನ್ನು ನೀಡಿದ್ದಾರೆ
ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಪ್ರತಾಪ್ ಸಿಂಹ, ಗಂಡನ ನಿಧನದ ಮೂರನೇ ದಿನಕ್ಕೆ ಹಾಲು ತುಪ್ಪ ಕಾರ್ಯ ಮುಗಿದ ನಂತರ ಅವರಿಗೆ ಗೂಟದ ಕಾರಿನ ನೆಪಾಗಿದೆ. ಗೂಟದ ಕಾರು ಕೈತಪ್ಪುತ್ತದೆ ಎಂದು ತಾನೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿದ್ದರು ಎಂದು ಗೀತಾ ಮಹದೇವ್ ಪ್ರಸಾದ್ ಕುರಿತು ಪ್ರತಾಪ್ ಸಿಂಹ ವ್ಯೆಂಗ್ಯೆ ಮಾಡಿದ್ದಾರೆ.
ಗೀತಾ ಮಹದೇವ್ ಪ್ರಸಾದ್ ಅವರಿಗೆ ಮತ ಹಾಕುವುದು ಒಂದೇ, ಗುಂಡ್ಲುಪೇಟೆ ಅಬಿವೃದ್ಧಿಗೆ ಎಳ್ಳು ನೀರು ಬಿಡುವುದು ಒಂದೇ ಎಂದು ಹೇಳಿಕೆ ನೀಡಿದ್ದಾರೆ.