×
Ad

ಮಲ್ಲೇಶ್ವರ ದೇವಾಲಯದಲ್ಲಿ ಮತ್ತೆ ಕಳ್ಳತನ

Update: 2017-03-27 12:13 IST

ತುಮಕೂರು, ಮಾ.27: ದೇವಾಲಯದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ದೇವರ ವಿಗ್ರಹದಲ್ಲಿದ್ದ ಚಿನ್ನದ ಮಾಂಗಲ್ಯವನ್ನು ಅಪಹರಿಸಿರುವ ಘಟನೆ ತಾಲೂಕಿನ ಹೆಬ್ಬಾಕದಲ್ಲಿ ನಡೆದಿದೆ.

 ನಗರಕ್ಕೆ ಸಮೀಪವಿರುವ ಹೆಬ್ಬಾಕ ಗ್ರಾಮದ ಶ್ರೀ ಮಲ್ಲೇಶ್ವರ ದೇವಾಲಯಕ್ಕೆ ನುಗ್ಗಿರುವ ಕಳ್ಳರು ಶ್ರೀ ಪಾರ್ವತಮ್ಮ ದೇವಿಯ ವಿಗ್ರಹದಲ್ಲಿದ್ದ ಚಿನ್ನದ ತಾಳಿ ಮತ್ತು ಬೆಳ್ಳಿ ಕರಡಿಗೆ ಸೇರಿದಂತೆ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೂರನೆ ಬಾರಿ ಶ್ರೀ ಮಲ್ಲೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ದೇವಳಗಳಲ್ಲಿ ಪದೇ ಪದೇ ನಡೆಯುತ್ತಿರುವ ಕಳ್ಳತನ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಮ್ಮನಾಗದೆ ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಲು ಮುಂದಾಗಬೇಕೆಂದು ಗ್ರಾಮಸ್ಥರು, ಸ್ಥಳಿಯ ಗ್ರಾಮದ ಜನಪ್ರತಿನಿಗಳು ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಾಕ್ಷರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News